NLM Subsidy Yojana-NLM ಯೋಜನೆಯಡಿ ಶೇ 50% ಸಬ್ಸಿಡಿಯಲ್ಲಿ ಉದ್ದಿಮೆ ಪ್ರಾರಂಭಿಸಲು ಸುವರ್ಣಾವಕಾಶ!

ರಾಷ್ಟ್ರೀಯ ಜಾನುವಾರು ಮಿಷನ್ (NLM) ಯೋಜನೆಯು ಭಾರತ ಸರ್ಕಾರದ ಪಶುಸಂಗೋಪನೆ ಇಲಾಖೆಯಿಂದ ಜಾರಿಯಾಗಿದ್ದು, ಕುರಿ, ಮೇಕೆ, ಹಂದಿ ಮತ್ತು ಕೋಳಿ ಸಾಕಾಣಿಕೆಗೆ 50% ವರೆಗೆ ಸಬ್ಸಿಡಿ ನೀಡುತ್ತದೆ. ಈ ಯೋಜನೆಯು ಉದ್ಯಮಶೀಲತೆ ಅಭಿವೃದ್ಧಿ, ತಳಿ ಸುಧಾರಣೆ ಮತ್ತು ಮಾಂಸ/ಮೊಟ್ಟೆ ಉತ್ಪಾದನೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಅರ್ಹ ವ್ಯಕ್ತಿಗಳು, ಎಫ್‌ಪಿಒಗಳು, ಎಸ್‌ಎಚ್‌ಜಿಗಳು ಮತ್ತು ರೈತರು ಈ ಸಬ್ಸಿಡಿ ಪಡೆಯಬಹುದು.
NLM ಯೋಜನೆಯ ಪ್ರಮುಖಾಂಶಗಳು:
- ಸಬ್ಸಿಡಿ: ಯೋಜನೆ ವೆಚ್ಚದ 50% ಸಬ್ಸಿಡಿ ಲಭ್ಯವಿದೆ (ಗರಿಷ್ಠ ರೂ. 25 ಲಕ್ಷದಿಂದ 50 ಲಕ್ಷದವರೆಗೆ).
- ಯಾವ ಚಟುವಟಿಕೆಗಳಿಗೆ?: ಕುರಿ/ಮೇಕೆ ಸಾಕಾಣಿಕೆ (500+25), ಕೋಳಿ ಸಾಕಾಣಿಕೆ (1000+), ಹಂದಿ ಸಾಕಾಣಿಕೆ (100+10).
- ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್ NLM ಪೋರ್ಟಲ್ ಅಥವಾ ಪಶುಸಂಗೋಪನೆ ಇಲಾಖೆ ಮೂಲಕ.
- ಸಾಲ ಸೌಲಭ್ಯ: ಉಳಿದ ಮೊತ್ತಕ್ಕೆ ಬ್ಯಾಂಕ್ ಸಾಲ ಸೌಲಭ್ಯ ಒದಗಿಸಲಾಗುತ್ತದೆ.
ಸಹಾಯಧನದ (Subsidy) ವಿವರ:
- ಒಟ್ಟು ಘಟಕ ವೆಚ್ಚ: ಅಂದಾಜು ₹50.00 ಲಕ್ಷ.
- ಸಬ್ಸಿಡಿ ಪ್ರಮಾಣ: ಒಟ್ಟು ವೆಚ್ಚದ 50% ರಷ್ಟು.
- ಗರಿಷ್ಠ ಸಬ್ಸಿಡಿ ಮೊತ್ತ: ಒಬ್ಬ ಫಲಾನುಭವಿಗೆ ಗರಿಷ್ಠ ₹25.00 ಲಕ್ಷ ಸಬ್ಸಿಡಿ ಸಿಗಲಿದೆ.
NLM Subsidy Amount-ಯಾವೆಲ್ಲ ಉದ್ದಿಮೆ ಆರಂಭಿಸಬಹುದು? ಸಬ್ಸಿಡಿ ಮೊತ್ತವೇಷ್ಟು?
ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಸಬ್ಸಿಡಿಯನ್ನು ಪಡೆದು ಈ ಕೆಳಗಿನ ಪಟ್ಟಿಯಲ್ಲಿರುವ ಉದ್ದಿಮೆಯನ್ನು ಪ್ರಾರಂಭಿಸಲು ಸಹಾಯಧನವನ್ನು ಪಡೆಯಬಹುದು.
1) ಗ್ರಾಮೀಣ ಕೋಳಿ ಉದ್ಯಮ ಅಭಿವೃದ್ಧಿ (1000 ದೇಶಿ ಮಾತೃಕೋಳಿ ಘಟಕ + ಹ್ಯಾಚರಿ ಘಟಕ+ಮರಿಗಳ ಸಾಕಾಣಿಕೆ ಘಟಕ) Rural Poultry Entrepreneurship Programme-ಘಟಕ ವೆಚ್ಚ ರೂ. 50.00 ಲಕ್ಷಕ್ಕೆ ಸಹಾಯಧನ ಶೇ 50% ರಷ್ಟು ಗರಿಷ್ಟ 25.00 ಲಕ್ಷ ಪಡೆಯಲು ಅವಕಾಶವಿರುತ್ತದೆ.
2) ಕುರಿ-ಮೇಕೆ ತಳಿ ಸಂವರ್ಧನಾ ಘಟಕ (500+25) Entrepreneur in small ruminant sector (Sheep and goat farming) ಘಟಕಕ್ಕೆ ಗರಿಷ್ಟ ಯೋಜನಾ ವೆಚ್ಚ ರೂ 1 ಕೋಟಿ ನಿಗದಿಪಡಿಸಲಾಗಿದ್ದು ಗರಿಷ್ಠ-ರೂ.50 ಲಕ್ಷ ದವರೆಗೆ ಸಹಾಯಧನವನ್ನು ಪಡೆಯಬಹುದು.
3) ಹಂದಿ ತಳಿ ಸಂವರ್ಧನಾ ಘಟಕ (100+10) Piggery entrepreneurship ಘಟಕ ವೆಚ್ಚ ರೂ. 60.00 ಲಕ್ಷ ಇದಕ್ಕೆ ಸಹಾಯಧನ ಶೇ 50% ರಷ್ಟು ಗರಿಷ್ಟ 30.00 ಲಕ್ಷ
4) ರಸಮೇವು ಉತ್ಪಾದನಾ ಘಟಕ (ವಾರ್ಷಿಕ 2000-2500 ಮೆ.ಟನ್ ಉತ್ಪಾದನೆ) Silage making unit for entrepreneurs (Production capacity 2000-2500 MT Per Annum). ಇದಕ್ಕೆ ಸಹಾಯಧನ ಶೇ.50 ರಷ್ಟು ಒಂದು ಘಟಕಕ್ಕೆ ಗರಿಷ್ಟ ಯೋಜನಾ ವೆಚ್ಚ ರೂ 1 ಕೋಟಿ ನಿಗದಿಪಡಿಸಲಾಗಿದ್ದು ಗರಿಷ್ಠ-ರೂ.50 ಲಕ್ಷ ದವರೆಗೆ ಸಹಾಯಧನವನ್ನು ಪಡೆಯಬಹುದು.
ಸಬ್ಸಿಡಿಯ ಕುರಿತು ಇನ್ನು ಹೆಚ್ಚಿನ ಮಾಹಿತಿಯನ್ನು ತಿಳಿಯಲು ಈ ಕೆಳಗಿನ ಕೋಷ್ಠಕವನ್ನು ನೋಡಿ:

Who Can Apply For NLM Scheme-ಯಾರೆಲ್ಲ ಅರ್ಜಿ ಸಲ್ಲಿಸಬಹುದು?
* ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
* ಅಭ್ಯರ್ಥಿಯ ವಯಸ್ಸು 18 ರಿಂದ 60 ವರ್ಷದ ಒಳಗಿರಬೇಕು.
* ಉದ್ದಿಮೆಯನ್ನು ಪ್ರಾರಂಭಿಸುವ ಕ್ಷೇತ್ರದಲ್ಲಿ ಅನುಭವನ್ನು ಹೊಂದಿರುವುದು ಕಡ್ಡಾಯ.
* ಬ್ಯಾಂಕ್ ಮೂಲಕ ಸಾಲವನ್ನು ಪಡೆಯಲು ಸಿಬಿಲ್ ಉತ್ತಮವಾಗಿರಬೇಕು.
ದಾಖಲೆಗಳು:
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್‌ಬುಕ್
- ಯೋಜನಾ ವರದಿ (Project Report)
- ಭೂಮಿಯ ದಾಖಲೆಗಳು.

