Fruits ID-ರೈತರ ಗಮನಕ್ಕೆ: ‘ಫ್ರೂಟ್ಸ್’ ತಂತ್ರಾಂಶದಲ್ಲಿ ಇ-ಕೆವೈಸಿ ಮತ್ತು ಡಿಜಿಟಲ್ ಸಹಮತಿ ಈಗ ಕಡ್ಡಾಯ!

ಬೆಂಗಳೂರು : ರಾಜ್ಯದ ರೈತರ ಸಮಗ್ರ ಮಾಹಿತಿಯನ್ನು ಒಳಗೊಂಡಿರುವ ‘ಫೂಟ್ಸ್’ ತಂತ್ರಾಂಶದಲ್ಲಿ ನೋಂದಾಯಿತರಾಗಿರುವ ಎಲ್ಲ ರೈತರು ಇ-ಕೆವೈಸಿ ಮಾಡಿಸುವುದು ಹಾಗೂ ಡಿಜಿಟಲ್ ಸಹಮತಿ (Digital Consent) ನೀಡುವುದನ್ನು ಸರಕಾರ ಕಡ್ಡಾಯಗೊಳಿಸಿದೆ.
ಭಾರತ ಸರಕಾರದ ‘ಡಿಜಿಟಲ್ ಅಗ್ರಿ ಮಿಷನ್’ ಅಡಿಯಲ್ಲಿ ರಾಜ್ಯ ರೈತ ನೋಂದಣಿ ಸ್ಥಾಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು ಸಂಬಂಧಪಟ್ಟ ಎಲ್ಲ ಇಲಾಖೆಗಳಿಗೆ ಮಂಗಳವಾರ ಸೂಚನೆ ನೀಡಿದ್ದಾರೆ.
ಕೇಂದ್ರ ಸರಕಾರದ ಮಾನದಂಡಗಳಂತೆ ರಾಜ್ಯದ ಎಲ್ಲ ಭೂ ಹಿಡುವಳಿದಾರ ರೈತರ ವಿವರಗಳನ್ನು ಒಳಗೊಂಡ ಡಿಜಿಟಲ್ ವ್ಯವಸ್ಥೆಯನ್ನು ಬಲಪಡಿಸುವುದು ಯೋಜನೆಯ ಗುರಿಯಾಗಿದೆ. ಈ ಯೋಜನೆಗಾಗಿ ಕರ್ನಾಟಕ ರಾಜ್ಯವು ವಿಶೇಷ ಕೇಂದ್ರ ನೆರವು ಕೋರಿ ಪ್ರಸ್ತಾವನೆಯನ್ನು ಈಗಾಗಲೇ ಸಲ್ಲಿಸಿದೆ.
ವಿಶೇಷವಾಗಿ ಪಿಎಂ-ಕಿಸಾನ್ ಯೋಜನೆಯಡಿ ಸೌಲಭ್ಯ ಪಡೆಯುತ್ತಿರುವ ಸುಮಾರು 4 ಲಕ್ಷ ಫಲಾನುಭವಿಗಳ ಇ-ಕೆವೈಸಿ ಪ್ರಕ್ರಿಯೆ ಇನ್ನೂ ಬಾಕಿ ಉಳಿದಿದ್ದು, ಇದನ್ನು ಆದ್ಯತೆಯ ಮೇಲೆ ಪೂರ್ಣಗೊಳಿಸಲು ಸರ್ಕಾರ ನಿರ್ಧರಿಸಿದೆ. ರೈತರು ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ, ಮೀನುಗಾರಿಕೆ ಇಲಾಖೆಗಳ ಕಚೇರಿಗಳಿಗೆ ಭೇಟಿ ನೀಡಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ನಿಗದಿತ ಸಮಯದೊಳಗೆ ಈ ಗುರಿಯನ್ನು ತಲುಪಲು ಜಿಲ್ಲಾ ಮತ್ತು ಇಲಾಖಾ ಮಟ್ಟದ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದ್ದು, ರೈತರಲ್ಲಿ ಈ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಲು ಸರ್ಕಾರ ಮುಂದಾಗಿದೆ.

⚠️ ಇ-ಕೆವೈಸಿ ಮತ್ತು ಡಿಜಿಟಲ್ ಸಹಮತಿ ಯಾಕೆ ಕಡ್ಡಾಯ?
ಸರ್ಕಾರ ಈ ಕ್ರಮವನ್ನು ಕಡ್ಡಾಯಗೊಳಿಸಿರುವ ಪ್ರಮುಖ ಕಾರಣಗಳು:
- ✔️ ನಿಜವಾದ ಫಲಾನುಭವಿಗಳನ್ನು ಗುರುತಿಸಲು
- ✔️ ಸಬ್ಸಿಡಿ ನೇರವಾಗಿ ರೈತರ ಖಾತೆಗೆ ತಲುಪಿಸಲು (DBT)
- ✔️ ಮಧ್ಯವರ್ತಿಗಳ ಹಸ್ತಕ್ಷೇಪ ತಡೆಯಲು
- ✔️ ರೈತರ ಡೇಟಾ ಸುರಕ್ಷತೆ ಮತ್ತು ಅನುಮತಿ ಪಡೆಯಲು
- ✔️ ಕೇಂದ್ರ ಯೋಜನೆಗಳ (PM-Kisan ಮುಂತಾದ) ಲಾಭ ಪಡೆಯಲು ಅಗತ್ಯ
❗ ಇ-ಕೆವೈಸಿ ಮಾಡದಿದ್ದರೆ ಏನು ಆಗುತ್ತದೆ?
- ಸರ್ಕಾರಿ ಸಬ್ಸಿಡಿ ನಿಲ್ಲಿಸಬಹುದು
- PM-Kisan ಕಂತು ತಡವಾಗಬಹುದು ಅಥವಾ ರದ್ದಾಗಬಹುದು
- ಬೆಳೆ ವಿಮೆ, ಬರ ಪರಿಹಾರ ಸೇರಿದಂತೆ ಹಲವಾರು ಸೌಲಭ್ಯಗಳು ದೊರೆಯದೇ ಹೋಗಬಹುದು
👉 ಹೀಗಾಗಿ ತಕ್ಷಣ ಇ-ಕೆವೈಸಿ ಮಾಡಿಸುವುದು ಅತ್ಯಗತ್ಯ.
🧾 ಇ-ಕೆವೈಸಿ ಮತ್ತು ಡಿಜಿಟಲ್ ಸಹಮತಿ ಮಾಡುವ ವಿಧಾನ
ರೈತರು ಕೆಳಗಿನ ಮಾರ್ಗಗಳಿಂದ ಸುಲಭವಾಗಿ ಈ ಪ್ರಕ್ರಿಯೆ ಪೂರ್ಣಗೊಳಿಸಬಹುದು:
📍 ಭೇಟಿ ನೀಡಿ:
- ರೈತ ಸಂಪರ್ಕ ಕೇಂದ್ರ (RSK)
- ಗ್ರಾಮ ಒನ್ (Grama One)
- ಕರ್ನಾಟಕ ಒನ್ ಕೇಂದ್ರ
- ಕೃಷಿ / ತೋಟಗಾರಿಕೆ ಇಲಾಖೆ ಕಚೇರಿ
📲 ಅಗತ್ಯ ವಿವರಗಳು:
- ಆಧಾರ್ ಸಂಖ್ಯೆ
- ಮೊಬೈಲ್ ಸಂಖ್ಯೆ (OTPಗಾಗಿ)
- ಬ್ಯಾಂಕ್ ವಿವರಗಳು
👉 OTP ಅಥವಾ ಬಯೋಮೆಟ್ರಿಕ್ ಮೂಲಕ ಇ-ಕೆವೈಸಿ ಪೂರ್ಣಗೊಳಿಸಬಹುದು.

