ಏಪ್ರಿಲ್ 1 ರಿಂದ PF ಹಣವನ್ನು UPI/ATM ನಿಂದಲೇ ಪಡೆಯಬಹುದು.
EPFO 3.0 News: ನೌಕರರ ಭವಿಷ್ಯ ನಿಧಿ ಸಂಸ್ಥೆ ಡಿಜಿಟಲ್ ಕ್ರಾಂತಿಯ ಹಾದಿಯಲ್ಲಿದ್ದು ಪ್ರಸ್ತಾವಿತ ಇಪಿಎಫ್‌ಒ 3.0 ಶೀಘ್ರದಲ್ಲೇ ಜಾರಿಯಾಗಲಿದೆ. ಇದರಡಿ ಇಪಿಎಫ್ ಖಾತೆದಾರರು ತಮ್ಮ ಪಿಎಫ್ ಖಾತೆಯೊಂದಿಗೆ ವ್ಯವಹರಿಸುವ ರೀತಿಯಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗಲಿವೆ ಎನ್ನಲಾಗುತ್ತಿದೆ. ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಡಿಜಿಟಲ್ ಕ್ರಾಂತಿಗೆ ಮುಂದಾಗಿದ್ದು ಪ್ರಸ್ತಾವಿತ ಇಪಿಎಫ್‌ಒ 3.0 ನವೀಕರಣದೊಂದಿಗೆ ಇಪಿಎಫ್ ಸದಸ್ಯರ ಭವಿಷ್ಯ ನಿಧಿ ಹಣ ಇನ್ಮುಂದೆ ಕೇವಲ ದೀರ್ಘಾವಧಿಯ ನಿವೃತ್ತಿ ಉಳಿತಾಯ ಮಾತ್ರ ಆಗಿರುವುದಿಲ್ಲ. ಇಪಿಎಫ್‌ಒ ಸದಸ್ಯರಿಗೆ ಇನ್ಮುಂದೆ ಪಿಎಫ್ ಹಣ…

