ದಾವಣಗೆರೆ ದಕ್ಷಿಣ ಉಪ ಚುನಾವಣೆ ಫಲಿತಾಂಶ LIVE: 13 ನೇ ಸುತ್ತಿನ ಅಂತ್ಯಕ್ಕೆ ಸಮರ್ಥ್ ಶಾಮನೂರು ಮುನ್ನಡೆ; BJP ಹಿಂದಕ್ಕೆ!

ಭಾರೀ ಕುತೂಹಲ ಕೆರಳಿಸಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ. ಭಾರೀ ಚರ್ಚೆಗೆ ಕಾರಣವಾಗಿದ್ದ ಈ ಕ್ಷೇತ್ರದತ್ತ ರಾಜ್ಯದ ಜನರ ಕಣ್ಣು ನೆಟ್ಟಿದೆ. ಕಾಂಗ್ರೆಸ್‌ನಿಂದ ಸಮರ್ಥ್ ಶಾಮನೂರು, ಬಿಜೆಪಿಯಿಂದ ಶ್ರೀನಿವಾಸ ದಾಸಕರಿಯಪ್ಪ ಸ್ಪರ್ಧೆ ಮಾಡಿದ್ದಾರೆ. ಯಾರಿಗೆ ಮುನ್ನಡೆ? ಈ ಬಗ್ಗೆ ವಿವರ ಇಲ್ಲಿದೆ.

ಮತದಾನ ಆರಂಭಗೊಂಡ ಮೊದಲ 6 ಸುತ್ತಿನಲ್ಲಿಯೂ ಒಮ್ಮೆಯೂ ಸಮರ್ಥ್ ಮುನ್ನಡೆ ಸಾಧಿಸಿಲ್ಲ. 7 ನೇ ಸುತ್ತಿನ ಬಿಜೆಪಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಮುನ್ನಡೆಯಲ್ಲಿದ್ದರು. 8 ಹಾಗೂ 9 ನೇ ಸುತ್ತಿಗೆ ಫಲಿತಾಂಶ ಉಲ್ಟಾ ಆಗಿದೆ. ಸದ್ಯ 15 ಸುತ್ತುಗಳು ಮುಕ್ತಾಯವಾಗಿದ್ದು, ಕಾಂಗ್ರೆಸ್‌ 6 ಸಾವಿರ ಮತಗಳ ಮುನ್ನಡೆ ಕಾಯ್ದುಕೊಂಡಿದೆ.

ದಾವಣಗೆರೆ ದಕ್ಷಿಣ 17 ನೇ ಸುತ್ತು ಕಾಂಗ್ರೆಸ್‌ 6 ಸಾವಿರ ಲೀಡ್‌

  • ಬಿಜೆಪಿ – 49,523
  • ಕಾಂಗ್ರೆಸ್- 55,700
  • ಎಸ್ ಡಿಪಿ – 17,713
  • ಕಾಂಗ್ರೆಸ್‌ ಅಭ್ಯರ್ಥಿ ಸಮರ್ಥ್‌ 6177 ಮತಗಳ ಮುನ್ನಡೆ ಸಾಧಿಸಿದ್ದಾರೆ.

ಬಿಜೆಪಿ-ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ

ಈ ಬಾರಿ ಉಪ ಚುನಾವಣೆಗೆ ಕಾಂಗ್ರೆಸ್‌ನಿಂದ ಶಾಮನೂರು ಶಿವಶಂಕರಪ್ಪ ಕುಟುಂಬದ ಸಮರ್ಥ್ ಶಾಮನೂರು, ಬಿಜೆಪಿಯಿಂದ ಶ್ರೀನಿವಾಸ ದಾಸ ಕರಿಯಪ್ಪ ಸ್ಪರ್ಧೆ ಮಾಡಿದ್ದರು. ಉಳಿದಂತೆ ಇತರೆ 23 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಬಾರಿ ಶೇ. 70 ರಷ್ಟು ಮತದಾನವಾಗಿತ್ತು.

ಇದೀಗ ಹಾಲಿ ಶಾಸಕರ ಸಾವಿನಿಂದ ತೆರವಾದ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಎರಡನೇ ಉಪಸಮರವಾಗಿದ್ದು, ಕಾಂಗ್ರೆಸ್ ಅಧಿಕಾರ ಚುಕಾಣಿ ಹಿಡಿದ ಸುಮಾರು ಮೂರು ವರ್ಷಗಳ ಹೊಸ್ತಿಲಲ್ಲಿ ಈ ಉಪಚುನಾವಣೆ ಎದುರಾಗಿದೆ. ಮೂರು ವರ್ಷದಲ್ಲಿನ ಸರ್ಕಾರದ ಕಾರ್ಯವೈಖರಿ ಉಪಸಮರದ ಮೇಲೆ ಹೇಗೆ ಪರಿಣಾಮ ಬೀರಲಿದೆ ಅನ್ನೋದನ್ನ ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *