🎓 SSLC ಫಲಿತಾಂಶ 2026: ಸಂಪೂರ್ಣ ಮಾಹಿತಿ, ಟಾಪರ್ಸ್, ಹೇಗೆ ಚೆಕ್ ಮಾಡುವುದು?

ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ SSLC ಫಲಿತಾಂಶ 2026 ಇಂದು (ಏಪ್ರಿಲ್ 23) ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (KSEAB) ಈ ಫಲಿತಾಂಶವನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ.
ಈ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಫಲಿತಾಂಶದ ಬಗ್ಗೆ ಉತ್ಸಾಹ ಹೆಚ್ಚಾಗಿದೆ.
📊 ಪ್ರಮುಖ ಹೈಲೈಟ್ಸ್ (Highlights)
- 📅 ಫಲಿತಾಂಶ ಪ್ರಕಟಣೆ: ಏಪ್ರಿಲ್ 23, ಮಧ್ಯಾಹ್ನ 12 ಗಂಟೆ
- 👨🎓 ಪರೀಕ್ಷೆಗೆ ಹಾಜರಾದವರು: ಸುಮಾರು 8.5–9 ಲಕ್ಷ ವಿದ್ಯಾರ್ಥಿಗಳು
- 🌐 ಅಧಿಕೃತ ವೆಬ್ಸೈಟ್ಗಳು:
- karresults.nic.in
- kseab.karnataka.gov.in
- 📱 Digi Locker, SMS, Karnataka One app ಮೂಲಕವೂ ಫಲಿತಾಂಶ ಲಭ್ಯ
🏆 ಟಾಪರ್ಸ್ ಮಾಹಿತಿ
ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿ 2026 ನೇ ಸಾಲಿನ ಎಸ್ಎಸ್ಎಲ್ಸಿ ಫಲಿತಾಂಶ ಬಿಡುಗಡೆ ಮಾಡಿದೆ. 7 ವಿದ್ಯಾರ್ಥಿಗಳು 625 ಕ್ಕೆ 625 ಅಂಕಗಳನ್ನು ಪಡೆದುಕೊಂಡಿದ್ದಾರೆ. ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಸೇರಿ 7 ಮಂದಿ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದ್ದಾರೆ. ಟಾಪರ್ಗಳ ಹೆಸರು, ಶಾಲೆ, ಊರು ವಿವರ ಇಲ್ಲಿದೆ
ಹೈಲೈಟ್ಸ್:
- ಎಸ್ಎಸ್ಎಲ್ಸಿ ಪರೀಕ್ಷೆ- 1 ರ ಫಲಿತಾಂಶ ಪ್ರಕಟ; 7 ಮಂದಿ 625 ಕ್ಕೆ 625 ಅಂಕ ಗಳಿಕೆ.
- ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿಯಿಂದ ಟಾಪರ್ಗಳ ಪಟ್ಟಿ ಬಿಡುಗಡೆ.
- ಚಿಕ್ಕೋಡಿಯ ಸರ್ಕಾರಿ ಶಾಲೆ ವಿದ್ಯಾರ್ಥಿನಿ ಪ್ರಾರ್ಥನಾ 625 ಕ್ಕೆ 625 ಅಂಕ ಗಳಿಸಿ ಸಾಧನೆ.

SSLC ಪರೀಕ್ಷೆ 2026 ಟಾಪರ್ಗಳ ಸಂಪೂರ್ಣ ವಿವರ
| ಜಿಲ್ಲೆ | ಶಾಲೆಯ ಹೆಸರು ಮತ್ತು ವಿಳಾಸ | ಆಡಳಿತ ಮಂಡಳಿ | ವಿದ್ಯಾರ್ಥಿಯ ಹೆಸರು | ಅಂಕಗಳು | ಶಾಲೆ ಮೊಬೈಲ್ ಸಂಖ್ಯೆ |
| ಚಿಕ್ಕೋಡಿ | ಸರ್ಕಾರಿ ಪ್ರೌಢಶಾಲೆ ಕಾಟಗೇರಿ, ಅಥಣಿ ತಾ., ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ, ಬೆಳಗಾವಿ ಉತ್ತರ | ಸರ್ಕಾರಿ | ಪ್ರಾರ್ಥನಾ ನಾಗಪ್ಪ ಬಿರಾದಾರ್ ಪಾಟೀಲ್ | 625 | 9880091033 |
| ದಾವಣಗೆರೆ | ಶ್ರೀ ವಿದ್ಯಾಲಕ್ಷ್ಮಿ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ಕಬ್ಬಾಳ, ಚನ್ನಗಿರಿ ತಾ., ದಾವಣಗೆರೆ ಜಿ. | ಅನುದಾನರಹಿತ | ಭರತ್ ಜಿ | 625 | 8197910580 |
| ಚಿಕ್ಕಮಗಳೂರು | ಸೇಂಟ್ ಮೇರಿಸ್ ಹೈಸ್ಕೂಲ್ ಕೋಟೆ, ಚಿಕ್ಕಮಗಳೂರು ತಾ., ಚಿಕ್ಕಮಗಳೂರು ಜಿ. | ಅನುದಾನರಹಿತ | ಬೃಂದಾ ಎಂ ತಪ್ಸೆ | 625 | 9480654507 |
| ಬೆಂಗಳೂರು ಉತ್ತರ | ಪೂರ್ಣ ಪ್ರಜ್ಞಾ ಎಜುಕೇಶನ್ ಸೆಂಟರ್ ಹೈಸ್ಕೂಲ್, ಸದಾಶಿವನಗರ, ಬೆಂಗಳೂರು ಉತ್ತರ | ಅನುದಾನರಹಿತ | ಧನುಷ್ ಸುಧೀರ್ ಮೈಸೂರು | 625 | 9108038046 |
| ಉಡುಪಿ | ಮದರ್ ತೆರೇಸಾ ಮೆಮೋರಿಯಲ್ ಸ್ಕೂಲ್ ಶಂಕರನಾರಾಯಣ, ಕುಂದಾಪುರ ತಾ., ಉಡುಪಿ ಜಿ. | ಅನುದಾನರಹಿತ | ಪ್ರೀತಮ್ ಜಿ ಪೂಜಾರಿ | 625 | 7259324484 |
| ವಿಜಯಪುರ | ಆಕ್ಸ್ಫರ್ಡ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ನಾಗರಬೆಟ್ಟ, ಮುದ್ದೇಬಿಹಾಳ ತಾ., ವಿಜಯಪುರ ಜಿ. | ಅನುದಾನರಹಿತ | ಸೌಜನ್ಯ ಬಸವರಾಜ್ ಕಂದಕೂರ್ | 625 | 8970507159 |
| ರಾಯಚೂರು | ಬಿ ವಿ ಆರ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ಕೆನಾಲ್ ರಸ್ತೆ ಮಾನವಿ, ಮಾನವಿ ತಾ., ರಾಯಚೂರು ಜಿ. | ಅನುದಾನರಹಿತ | ಸುಖದೇವ | 625 | 789218 |

