ಹವಾಮಾನ ವೈಪರೀತ್ಯದಿಂದ 2030ರ -ವೇಳೆಗೆ ಬಯಲುಸೀಮೆಯಲ್ಲಿ ಅಡಿಕೆ ಬೆಳೆಗೆ ಅಪಾಯ !!

ಹವಾಮಾನ ವೈಪರೀತ್ಯದಿಂದಾಗಿ ರಾಜ್ಯದ ಅಡಿಕೆ ಕೃಷಿ ಅಪಾಯ ಎದುರಿಸುತ್ತದೆ. ತಾಪಮಾನ ಹೆಚ್ಚಳ, ವಿವಿಧ ರೋಗ ರುಜಿನಗಳಿಂದಾಗಿ ಕೆಲವೆಡೆ ಅಡಿಕೆ ತೋಟಗಳೇ ನಾಶವಾಗುತ್ತಿವೆ. ಬೆಂಗಳೂರಿನ ‘ಎಂಪ್ರಿ’ ಸಂಸ್ಥೆ ಹಾಗೂ ವಿವಿಧ ಇಲಾಖೆಗಳು, ಸಂಸ್ಥೆಗಳ ಸಹಯೋಗದೊಂದಿಗೆ ಅಡಿಕೆ ಕೃಷಿ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅಧ್ಯಯನ ನಡೆಸಿದೆ. ಅಧ್ಯಯನದ ವೇಳೆ ಗುರುತಿಸಿರುವ ಸಮಸ್ಯೆಗಳು ಹಾಗೂ ತಜ್ಞರಿಂದ ಸಂಗ್ರಹಿಸಿ ರುವ ಪರಿಹಾರ ಮಾಹಿತಿಯನ್ನು ದಾಖಲಿಸಿದೆ . ಒಟ್ಟಾರೆ ಅಧ್ಯಯನದ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಸೂರ್ಯನ ನೇರ ಬಿಸಿಲು ಅಡಿಕೆ ಮರದ ಕಾಂಡದ ಮೇಲೆ ಬಿದ್ದಾಗ, ತೊಗಟೆ ಒಣಗಿ ಬಿರುಕು ಬಿಡುತ್ತದೆ, ಇದು ಮರದ ಆಯುಷ್ಯವನ್ನು ಕಡಿಮೆ ಮಾಡುತ್ತದೆ. ಅತಿಯಾದ ಶಾಖದಿಂದ ಅಡಿಕೆ ಸಿಂಗಾರ (ಹೂಗೊನೆ) ಒಣಗಿ, ಕಾಯಿಗಳು ಬಲಿಯುವ ಮುನ್ನವೇ ಉದುರುತ್ತವೆ. ಸಣ್ಣ ಗಿಡಗಳು ಅಧಿಕ ಉಷ್ಣತೆಯನ್ನು ತಡೆದುಕೊಳ್ಳಲಾರದೆ ಒಣಗಿ ಹೋಗುತ್ತವೆ.
ಹವಾಮಾನ ವೈಪರೀತ್ಯ: ಅಡಿಕೆ ಬೆಳೆಗೆ ಅಪಾಯ
ಇತ್ತೀಚಿನ ಅಧ್ಯಯನಗಳು ಮತ್ತು ವರದಿಗಳ ಪ್ರಕಾರ, ಹವಾಮಾನ ಬದಲಾವಣೆ (Climate Change) ಅಡಿಕೆ ಬೆಳೆಗಾರರಿಗೆ ದೊಡ್ಡ ಆತಂಕವಾಗಿ ಪರಿಣಮಿಸಿದೆ.
ಪ್ರಮುಖ ಕಾರಣಗಳು
- ತಾಪಮಾನ ಏರಿಕೆ
ಮುಂದಿನ ವರ್ಷಗಳಲ್ಲಿ 1.1°C ರಿಂದ 2.6°C ವರೆಗೆ ತಾಪಮಾನ ಹೆಚ್ಚಾಗುವ ಸಾಧ್ಯತೆ ಇದೆ. - ಮಳೆಯ ಅಸ್ಥಿರತೆ
ಎಲ್ ನಿನೊ ಪರಿಣಾಮದಿಂದ ಮುಂಗಾರು ಮಳೆ ಕಡಿಮೆಯಾಗುವ ಸಾಧ್ಯತೆ ಇದೆ. - ಹೀಟ್ವೇವ್ (ಬಿಸಿಗಾಳಿ)
ಕರ್ನಾಟಕದಲ್ಲಿ ಈಗಾಗಲೇ 40°Cಕ್ಕಿಂತ ಹೆಚ್ಚು ತಾಪಮಾನ ದಾಖಲಾಗುತ್ತಿದೆ

ಪರಿಸರ ನಿರ್ವಹಣೆ ಮತ್ತು ನೀತಿ ಸಂಸ್ಥೆ (EMPRI) ನಡೆಸಿದ ಅಧ್ಯಯನದ ಪ್ರಕಾರ, ಈ ಕೆಳಗಿನ ಪ್ರಮುಖ ಅಂಶಗಳು ಅಡಿಕೆ ಕೃಷಿಯ ಭವಿಷ್ಯದ ಮೇಲೆ ಪರಿಣಾಮ ಬೀರಲಿವೆ:
- ಕೃಷಿ ಅಸಾಧ್ಯತೆ: ಹವಾಮಾನ ಬದಲಾವಣೆಯ ತೀವ್ರತೆಯಿಂದಾಗಿ 2030ರ ವೇಳೆಗೆ ಕರ್ನಾಟಕದ ಬಯಲುಸೀಮೆ ಭಾಗಗಳಲ್ಲಿ ಅಡಿಕೆ ಬೆಳೆಯುವುದು ಅಸಾಧ್ಯವಾಗಬಹುದು.
- ತಾಪಮಾನ ಏರಿಕೆ: ಮುಂದಿನ ದಿನಗಳಲ್ಲಿ ತಾಪಮಾನವು
ರಿಂದ
ಡಿಗ್ರಿ ಸೆಲ್ಸಿಯಸ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ, ಇದು ಅಡಿಕೆ ಮರಗಳ ಬೆಳವಣಿಗೆಗೆ ಮಾರಕವಾಗಿದೆ.
- ಬೆಳೆ ನಾಶ ಮತ್ತು ರೋಗಗಳು:
- ಕಾಯಿ ಉದುರುವಿಕೆ: ಏಪ್ರಿಲ್-ಮೇ ತಿಂಗಳ ವಿಪರೀತ ಶಾಖದಿಂದ ಎಳೆ ಅಡಿಕೆ ಕಾಯಿಗಳು ಉದುರಿ ಅರ್ಧಕ್ಕರ್ಧ ಬೆಳೆ ನಾಶವಾಗುವ ಸಾಧ್ಯತೆ ಇರುತ್ತದೆ.
- ಕೊಳೆ ರೋಗ: ಅಕಾಲಿಕ ಮತ್ತು ನಿರಂತರ ಮಳೆಯಿಂದಾಗಿ ಅಡಿಕೆಗೆ ‘ಕೊಳೆ ರೋಗ’ ತಗುಲುವ ಅಪಾಯ ಹೆಚ್ಚಿದೆ.
- ಕೊಯ್ಲು ಮತ್ತು ಸಂಸ್ಕರಣೆ ಸಮಸ್ಯೆ: ಅಕಾಲಿಕ ಮಳೆ ಮತ್ತು ವಾಯುಭಾರ ಕುಸಿತದಿಂದಾಗಿ ಕೊಯ್ಲು ಮಾಡಿದ ಅಡಿಕೆಯನ್ನು ಒಣಗಿಸಲು ರೈತರು ಹರಸಾಹಸ ಪಡಬೇಕಾದ ಸ್ಥಿತಿ ಎದುರಾಗುತ್ತಿದೆ

ಈ ಬಾರಿ ತಾಪಮಾನ ಏರಿಕೆ: ಈ ಬಾರಿ ಅವಧಿಗೂ ಮುನ್ನವೇ ಬೇಸಿಗೆ ಆರಂಭವಾಗಿದ್ದು, ತಾಪಮಾನವು
ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್ನಿಂದ 3 ಡಿಗ್ರಿ ಸೆಲ್ಸಿಯಸ್ವರೆಗೆ ಏರಿಕೆಯಾಗುವ ಸಾಧ್ಯತೆ ಇದೆ. ಏಪ್ರಿಲ್ ಅಂತ್ಯದ ವೇಳೆಗೆ ಇನ್ನಷ್ಟು ಬಿಸಿಲಿನ ಪ್ರಖರತೆ ಹೆಚ್ಚಾಗುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸೂರ್ಯನ ನೇರ ಬಿಸಿಲು ಅಡಿಕೆ ಮರದ ಕಾಂಡದ ಮೇಲೆ ಬಿದ್ದಾಗ, ತೊಗಟೆ ಒಣಗಿ ಬಿರುಕು ಬಿಡುತ್ತದೆ, ಇದು ಮರದ ಆಯುಷ್ಯವನ್ನು ಕಡಿಮೆ ಮಾಡುತ್ತದೆ. ಅತಿಯಾದ ಶಾಖದಿಂದ ಅಡಿಕೆ ಸಿಂಗಾರ (ಹೂಗೊನೆ) ಒಣಗಿ, ಕಾಯಿಗಳು ಬಲಿಯುವ ಮುನ್ನವೇ ಉದುರುತ್ತವೆ. ಸಣ್ಣ ಗಿಡಗಳು ಅಧಿಕ ಉಷ್ಣತೆಯನ್ನು ತಡೆದುಕೊಳ್ಳಲಾರದೆ ಒಣಗಿ ಹೋಗುತ್ತವೆ.
ಈ ಹವಮಾನ ವೈಪರೀತ್ಯದಿಂದಾಗಿ ಗಿಡಗಳು ಕೊಳೆ ರೋಗ/ ಶಿಲೀಂಧ್ರ ರೋಗಗಳಿಗೆ ಬೇಗನೆ ತುತ್ತಾಗುತ್ತವೆ.
ಸಮಸ್ಯೆಗಳಿಗೆ ಪರಿಹಾರವೇನು ?
ಸಾವಯವ / ಜೈವಿಕ ಗೊಬ್ಬರಗಳನ್ನು ನೀಡುವ ಮೂಲಕ ಮಣ್ಣಿನ ಫಲವತ್ತತೆ ಹೆಚ್ಚಿಸುವುದು, ಅಡಿಕೆ ಮರಗಳ ಬುಡಕ್ಕೆ ಹೊದಿಕೆ, ಸೂಕ್ತವಾದ ಪೋಷಕಾಂಶ ನಿರ್ವಹಣೆ, ತೇವಾಂಶ ಕಾಪಾಡುವುದು ಸೇರಿಂದಂತೆ, ಅಡಿಕೆ ಕೃಷಿಗೆ ಪೂರಕವಾದ ವಾತಾವರಣ ಸೃಷ್ಟಿಸುವ ಮೂಲಕ ಅಡಿಕೆ ಕೃಷಿಗೆ ಭವಿಷ್ಯದಲ್ಲಿ ಎದುರಾಗಬಹುದಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎನ್ನುತ್ತಾರೆ ತಜ್ಞರು.

- ಅಡಿಕೆ ಮರಗಳ ಬುಡಕ್ಕೆ ಹಸಿರೆಲೆ ಹೊದಿಕೆ, ನಿಯಮಿತವಾಗಿ ಹಸಿರೆಲೆ ಗೊಬ್ಬರ ಮತ್ತು ಎರೆಹುಳು ಗೊಬ್ಬರ ನೀಡುವುದರಿಂದ ರೋಗಗಳನ್ನು ತಡೆಗಟ್ಟಬಹುದು. ಮರದ ಬುಡಗಳಿಗೆ ಬೇವಿನ ಹಿಂಡಿ ಮತ್ತು ಹೊಂಗೆ ಹಿಂಡಿ ಹಾಕುವುದರಿಂದಲೂ ಪೋಷಕಾಂಶ ನಿರ್ವಹಣೆ ಮಾಡಬಹುದು ಎಂದು ಅವರು ಶಿಫಾರಸು ಮಾಡುತ್ತಾರೆ.
- “ಬೇವಿನ ಎಣ್ಣೆ ಸಿಂಪಡಣೆಯಿಂದ ಗಿಡಗಳ ಬೆಳವಣಿಗೆಗೆ ಅಗತ್ಯವಿರುವ ಪೋಷಕಾಂಶ ಪೂರೈಸುವ ಜೊತೆಗೆ, ಬೇರುಗಳಿಗೆ ಬರುವ ರೋಗಗಳೂ ಕಡಿಮೆಯಾಗುತ್ತವೆ. ದುಂಡುಹುಳುಗಳನ್ನು ನಿಯಂತ್ರಿಸಿಸಬಹುದು’ .

