PUC Marksheet download: 2ನೇ ಪಿಯುಸಿ ಅಂಕಪಟ್ಟಿ ಈಗ ಮೊಬೈಲ್‌ನಲ್ಲೇ! ಡಿಜಿಲಾಕರ್ ಮೂಲಕ ಕ್ಷಣಗಳಲ್ಲಿ ಡೌನ್‌ಲೋಡ್ ಹೇಗೆ?

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1 ಫಲಿತಾಂಶವನ್ನು ಏಪ್ರಿಲ್ 9ರಂದು ಮಧ್ಯಾಹ್ನ 3 ಗಂಟೆಗೆ ಪ್ರಕಟಿಸಿದೆ. ಲಕ್ಷಾಂತರ ವಿದ್ಯಾರ್ಥಿಗಳ ಕುತೂಹಲಕ್ಕೆ ತೆರೆ ಬಿದ್ದಿದೆ.

ಈಗ ಫಲಿತಾಂಶ ನೋಡುವುದರ ಜೊತೆಗೆ ಅಧಿಕೃತ ಅಂಕಪಟ್ಟಿಯನ್ನು ಪಡೆಯಲು ಎಲ್ಲರೂ ಕಾತರರಾಗಿದ್ದಾರೆ.

ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ, ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ಕೇಂದ್ರ ಸರ್ಕಾರದ ಅಧಿಕೃತ ‘ಡಿಜಿಲಾಕರ್’ (Digilocker) ಪ್ಲಾಟ್‌ಫಾರ್ಮ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು ಅಂಕಪಟ್ಟಿ ಪಡೆಯಲು ಕಾಲೇಜುಗಳಿಗೆ ಅಲೆಯುವ ಅವಶ್ಯಕತೆ ಇಲ್ಲದೆ, ತಮ್ಮ ಮೊಬೈಲ್ ಮೂಲಕವೇ ಎಲ್ಲಿ ಬೇಕಾದರೂ ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ಡಿಜಿಟಲ್ ಅಂಕಪಟ್ಟಿಯು ಭೌತಿಕ ಅಂಕಪಟ್ಟಿಯಷ್ಟೇ ಅಧಿಕೃತ ಮಾನ್ಯತೆಯನ್ನು ಹೊಂದಿರುವುದು ವಿಶೇಷ.

How To Get PUC Markscard In DigiLocker-ಡಿಜಿಲಾಕರ್ ಮೂಲಕ ಅಂಕಪಟ್ಟಿ ಪಡೆಯುವುದು ಹೇಗೆ?

Step-1: ವಿದ್ಯಾರ್ಥಿಗಳು ಮೊದಲಿಗೆ ಈ Download Now ಲಿಂಕ್ ಮೇಲೆ ಕ್ಲಿಕ್ ಮಾಡಿ ಗೂಗಲ್ ಪ್ಲೈ ಸ್ಟೋರ್ ಅನ್ನು ಪ್ರವೇಶ ಮಾಡಿ ಸರಕಾರದ ಅಧಿಕೃತ ಡಿಜಿಲಾಕರ್ ಮೊಬೈಲ್ ಅಪ್ಲಿಕೇಶನ್ ಅನ್ನು ತಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬೇಕು.

Step-2: ಡಾಕ್ಯುಮೆಂಟ್ ವಿಭಾಗಗಳ ಅಡಿಯಲ್ಲಿ ಇರುವ ‘Education and Learning’ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.

Step-3: ಈ ಸಂದರ್ಭದಲ್ಲಿ Karnataka School Examination and Assessment Board (KSEAB) ಎಂಬ ಬೋರ್ಡ್ ಅನ್ನು ಆಯ್ಕೆಮಾಡಿ.

Step-4: Class 12 Marksheet ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

Step-5: PUC 2 (2026) ರೋಲ್ ನಂಬರ್ ಹಾಗೂ ಅಗತ್ಯವಿರುವ ಇತರ ವಿವರಗಳನ್ನು ನಮೂದಿಸಿ, ನಂತರ 2nd PUC Result 2026 PDF ಡೌನ್‌ಲೋಡ್ ಮಾಡಲು ಮುಂದುವರಿಯಿರಿ.

Step-6: Karnataka PUC 2 Result 2026 ನಿಮ್ಮ ಪರದೆಯಲ್ಲಿ (screen) ಕಾಣಿಸುತ್ತದೆ.

Step-7: Karnataka Board Class 12 (PUC) ಫಲಿತಾಂಶವನ್ನು ಡೌನ್‌ಲೋಡ್ ಮಾಡಿ.

Leave a Reply

Your email address will not be published. Required fields are marked *