Karnataka 2nd PUC Results 2026 Live: ದ್ವಿತೀಯ ಪಿಯುಸಿ ಪರೀಕ್ಷೆಗೆ ಕ್ಷಣಗಣನೆ: ನಿಮ್ಮ ರಿಸಲ್ಟ್ ಹೀಗೆ ಚೆಕ್ ಮಾಡಿ

Karnataka 2nd PUC Results 2026 Live: ಫಲಿತಾಂಶವನ್ನ ಮಧ್ಯಾಹ್ನ 3 ಗಂಟೆಗೆ ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಅಧಿಕೃತ ವೆಬ್‌ಸೈಟ್ ಮೂಲಕ ವಿದ್ಯಾರ್ಥಿಗಳು ಪಿಯುಸಿ ರಿಸಲ್ಟ್ ನೋಡಬಹುದಾಗಿದೆ.
Karnataka 2nd PUC Results 2026 Live: ನಿಮ್ಮ ರಿಸಲ್ಟ್ ಹೀಗೆ ಚೆಕ್ ಮಾಡಿ
ಇಂದು ಮಧ್ಯಾಹ್ನ 3 ಗಂಟೆಗೆ ಪ್ರಕಟಗೊಳ್ಳಲಿರುವ ದ್ವಿತೀಯ ಪಿಯುಸಿ ಫಲಿತಾಂಶದ ಮಾಹಿತಿ ಅಧಿಕೃತ ವೆಬ್‌ಸೈಟ್
https://karresults.nic.in
ಲಿಂಕ್ ಮೂಲಕ ರಿಸಲ್ಟ್ ವೀಕ್ಷಿಸಬಹುದಾಗಿದೆ. ಲಿಂಕ್ ಮೇಲೆ ಕ್ಲಿಕ್ ಮಾಡಿ ರಿಜಿಸ್ಟ್ರೇಶನ್ ನಂಬರ್ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ, ‘Submit’ ಬಟನ್ ಒತ್ತಿದ ತಕ್ಷಣ ಅಂಕಪಟ್ಟಿ ಪರದೆ ಓಪನ್ ಆಗಲಿದೆ.
ಇನ್ನುಳಿದಂತೆ ಕರ್ನಾಟಕ ಒನ್ ಮೊಬೈಲ್ ಆ್ಯಪ್ ನಲ್ಲಿ ಸಿಗಲಿದೆ. ವಿದ್ಯಾರ್ಥಿಗಳ ಮೊಬೈಲ್‌ಗೆ SMS ಮೂಲಕ ಫಲಿತಾಂಶದ ಮಾಹಿತಿ ರವಾನೆಯಾಗುತ್ತದೆ. ಇನ್ನು ಈ ವರ್ಷ ಪ್ರಥಮ ಬಾರಿಗೆ ಡಿಜಿಲಾಕರ್‌ನಲ್ಲೂ
https://www.digilocker.govt.in
ನಲ್ಲೂ ರಿಸಲ್ಟ್ ವೀಕ್ಷಿಸಬಹುದಾಗಿದೆ.
ಫಲಿತಾಂಶದಲ್ಲಿ ಇರುವ ಮಾಹಿತಿ:
- ಪ್ರತಿ ವಿಷಯದ ಅಂಕಗಳು ಮತ್ತು ಗ್ರೇಡ್‌ಗಳು (Subject-wise marks & grades)
- ಒಟ್ಟು ಅಂಕಗಳು ಮತ್ತು ಶೇಕಡಾವಾರು (Total marks & overall percentage)
- ಪಾಸ್ / ಫೇಲ್ ಸ್ಥಿತಿ (Pass/Fail status)
- ಮೇಲ್ದರ್ಜೆ ಶಿಕ್ಷಣಕ್ಕೆ ಅರ್ಹತಾ ಟಿಪ್ಪಣಿ (Qualifying remarks for higher education)
ಈ ಮಾಹಿತಿಗಳು ವಿದ್ಯಾರ್ಥಿಯ ಶೈಕ್ಷಣಿಕ ಸಾಧನೆ ಹಾಗೂ ಮುಂದಿನ ಪ್ರವೇಶಗಳಿಗೆ ಬಹಳ ಮುಖ್ಯವಾಗಿವೆ.

