Kerosene Rules: ಮತ್ತೆ ಸೀಮೆಎಣ್ಣೆಗೆ ಮರಳಿದ ಭಾರತ! LPG ಬಿಕ್ಕಟ್ಟಿನ ನಡುವೆ 60 ದಿನಗಳ ತಾತ್ಕಾಲಿಕ ರಿಲೀಫ್, ಕೇಂದ್ರ ಸರ್ಕಾರ ಈ ನಿರ್ಧಾರಕ್ಕೆ ಮುಂದಾಗಿದ್ದು ಅದೊಂದು ಕಾರಣಕ್ಕೆ!

Government Relaxes Kerosene Rules: ಸಬ್ಸಿಡಿಗಳ ಅಂತ್ಯವು ಮುಕ್ತ ಮಾರುಕಟ್ಟೆಯಲ್ಲಿ ಅದರ ಬೆಲೆಯಲ್ಲಿ ಹೆಚ್ಚಳಕ್ಕೆ ಕಾರಣವಾಯಿತು ಮತ್ತು ಎಲ್ಪಿಜಿ ಸಂಪರ್ಕಗಳು ಮತ್ತು ಗ್ಯಾಸ್ ಸಿಲಿಂಡರ್ಗಳ ವ್ಯಾಪಕ ಲಭ್ಯತೆಯು ಸೀಮೆಎಣ್ಣೆ ಬಳಕೆಯಲ್ಲಿ ಇಳಿಕೆಗೆ ಕಾರಣವಾಯಿತು. ಕ್ರಮೇಣ, ಸೀಮೆಎಣ್ಣೆ ಮಾರುಕಟ್ಟೆಯಿಂದ ಕಣ್ಮರೆಯಾಯಿತು.
ನವದೆಹಲಿ: ಇಂಧನ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯದಿಂದ ತೊಂದರೆ ಅನುಭವಿಸುತ್ತಿರುವ ಗ್ರಾಹಕರಿಗೆ ಅನುಕೂಲ ಕಲ್ಪಿಸಲು ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಗೃಹ ಬಳಕೆ ಉದ್ದೇಶಗಳಿಗಾಗಿ ತಾತ್ಕಾಲಿಕವಾಗಿ ಸೀಮೆಎಣ್ಣೆ ವಿತರಣೆಗೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಮುಂದಾಗಿದೆ.
‘ಸೀಮೆಎಣ್ಣೆ ಮುಕ್ತ’ ಎಂದು ಘೋಷಿಸಿರುವ ರಾಜ್ಯಗಳೂ ಸೇರಿದಂತೆ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಾರ್ವಜನಿಕ ವಿತರಣೆ ವ್ಯವಸ್ಥೆಯ (ಪಿಡಿಎಸ್) ಅಡಿಯಲ್ಲಿ ತಾತ್ಕಾಲಿಕವಾಗಿ ಸೀಮೆಎಣ್ಣೆ ಹಂಚಿಕೆ ಮಾಡಲಾಗುವುದು. ಎಲ್ಪಿಜಿ ಮೇಲಿನ ಒತ್ತಡವನ್ನು ಕಡಿಮೆ ಮಾಡಲು, ಮನೆಗಳಲ್ಲಿ ಅಡುಗೆ ಮಾಡಲು ಮತ್ತು ದೀಪದ ಅಗತ್ಯಗಳನ್ನು ಪೂರೈಸಿಕೊಳ್ಳಲು ಇದು ನೆರವಾಗಲಿದೆ ಎಂದು ಅಧಿಸೂಚನೆಯಲ್ಲಿ ಸಚಿವಾಲಯ ಹೇಳಿದೆ.
ಸೀಮೆಎಣ್ಣೆ ವಿತರಣೆಗೆ ಅನುಮತಿ ನೀಡಿರುವ 21 ರಾಜ್ಯಗಳು
1.ದೆಹಲಿ
2.ಚಂಡೀಗಢ
3.ಹರಿಯಾಣ
4.ಪಂಜಾಬ್
5.ಉತ್ತರ ಪ್ರದೇಶ
6.ರಾಜಸ್ಥಾನ
7.ಗೋವಾ
8.ಮಧ್ಯಪ್ರದೇಶ
9.ಗುಜರಾತ್
10.ಮಹಾರಾಷ್ಟ್ರ
11.ಹಿಮಾಚಲ ಪ್ರದೇಶ
12.ಉತ್ತರಾಖಂಡ
13.ಜಮ್ಮು ಮತ್ತು ಕಾಶ್ಮೀರ
14.ಲಡಾಖ್
15.ಪುದುಚೇರಿ
16.ಆಂಧ್ರಪ್ರದೇಶ
17.ತೆಲಂಗಾಣ
18.ಕರ್ನಾಟಕ
19.ತಮಿಳುನಾಡು
20.ಕೇರಳ
ಕೇಂದ್ರಾಡಳಿತ ಪ್ರದೇಶಗಳು
ಲಭ್ಯವಿರುವ ಎಲ್ಪಿಜಿಯಲ್ಲಿ ಗೃಹ ಬಳಕೆಗೆ ಆದ್ಯತೆ ನೀಡಲಾಗಿದ್ದರೂ, ಸೀಮಿತ ದಾಸ್ತಾನಿನ ಆತಂಕದಿಂದ ಜನರು ಭೀತಿಗೊಂಡು ಖರೀದಿಸಲು ಮುಂದಾಗಿದ್ದಾರೆ. ಎಲ್ಪಿಜಿ ಮೇಲಿನ ಒತ್ತಡ ಕಡಿಮೆ ಮಾಡಲು ಇದೀಗ ಸೀಮೆಎಣ್ಣೆ ವಿತರಣೆಗೆ ಸರ್ಕಾರ ಮುಂದಾಗಿದೆ.

