ಪೆಟ್ರೋಲ್ ರೇಟ್ ಲೀಟರ್ಗೆ 5 ರೂಪಾಯಿ ಏರಿಕೆ.. ಇಂದಿನಿಂದಲೇ ಪರಿಷ್ಕೃತ ದರ ಜಾರಿ

ಈಗಾಗಲೇ ಗ್ಯಾಸ್ ದರ ಏರಿಕೆ ಹಾಗೂ ಹೋಟೆಲ್ ತಿಂಡಿಗಳ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನ ಸಾಮಾನ್ಯರಿಗೆ ಈಗ ಮತ್ತೊಂದು ಆಘಾತ ಎದುರಾಗಿದೆ. ಖಾಸಗಿ ಇಂಧನ ಕಂಪನಿಯಾದ ‘ನಯಾರಾ’ (Nayara) ತನ್ನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಏಕಾಏಕಿ ಏರಿಕೆ ಮಾಡಿದೆ.
ಬೆಂಗಳೂರು: ಈಗಾಗಲೇ ಗ್ಯಾಸ್ ದರ ಏರಿಕೆ ಹಾಗೂ ಹೋಟೆಲ್ ತಿಂಡಿಗಳ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನ ಸಾಮಾನ್ಯರಿಗೆ ಈಗ ಮತ್ತೊಂದು ಆಘಾತ ಎದುರಾಗಿದೆ. ಖಾಸಗಿ ಇಂಧನ ಕಂಪನಿಯಾದ ‘ನಯಾರಾ’ (Nayara) ತನ್ನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಏಕಾಏಕಿ ಏರಿಕೆ ಮಾಡಿದೆ.ಸಾಮಾನ್ಯ ಮತ್ತು ಪ್ರೀಮಿಯಂ ಪೆಟ್ರೋಲ್ ನಡುವಿನ ವ್ಯತ್ಯಾಸವೇನು?ಪೆಟ್ರೋಲ್ ಗ್ರೇಡ್ ಅನ್ನು ಅದರ ಆಕ್ಟೇನ್ ಮೌಲ್ಯದ (Octane Value) ಆಧಾರದ ಮೇಲೆ ವರ್ಗೀಕರಿಸಲಾಗುತ್ತದೆ.ಭಾರತದಲ್ಲಿ ಸಾಮಾನ್ಯ ಪೆಟ್ರೋಲ್ನ ಆಕ್ಟೇನ್ ಮೌಲ್ಯ 87 ಆಗಿರುತ್ತದೆ.ಪ್ರೀಮಿಯಂ ಪೆಟ್ರೋಲ್ನ ಆಕ್ಟೇನ್ ಮೌಲ್ಯ 91 ಆಗಿರುತ್ತದೆ.ಹೆಚ್ಚಿನ ಆಕ್ಟೇನ್ ಹೊಂದಿರುವ ಇಂಧನವು ಹೆಚ್ಚಿನ ಕಂಪ್ರೆಷನ್ ಅನುಪಾತವನ್ನು (Compression ratio) ಹೊಂದಿರುತ್ತದೆ. ಇದರಿಂದ ವಾಹನದ ಇಂಜಿನ್ ಸ್ಟಾರ್ಟ್ ಆಗುವ ಸಮಯದಲ್ಲಿ ಹೆಚ್ಚು ಇಂಧನವನ್ನು ವ್ಯಯಿಸುವುದಿಲ್ಲ. ಅಲ್ಲದೆ, ಇದು ಕಾರ್ಬನ್ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ. ಶಕ್ತಿಯುತ ಇಂಜಿನ್ ಹೊಂದಿರುವ ಸ್ಪೋರ್ಟ್ಸ್ ಕಾರುಗಳು, ಪ್ರೀಮಿಯಂ ಬೈಕ್ಗಳು ಮತ್ತು ಸೂಪರ್ ಕಾರುಗಳಿಗೆ ಈ ಪ್ರೀಮಿಯಂ ಪೆಟ್ರೋಲ್ ಅತ್ಯುತ್ತಮ ಎಂದು ಹೇಳಲಾಗುತ್ತದೆ
ತಾಜಾ ಏರಿಕೆಯ ನಂತರ, ಪ್ರಸ್ತುತ ದೆಹಲಿ ಮಾರುಕಟ್ಟೆಯಲ್ಲಿ 111.68 ರೂ. ಇದ್ದ ಪ್ರೀಮಿಯಂ ಪೆಟ್ರೋಲ್ ಬೆಲೆ 113.77 ರೂ. ಗೆ ತಲುಪಿದೆ. ಆದರೆ ಡೀಲರ್ ಕಮಿಷನ್ ವ್ಯತ್ಯಾಸವಿರುವುದರಿಂದ ಇದು ವಿವಿಧ ಪ್ರದೇಶಗಳಲ್ಲಿ ಬೇರೆ ಬೇರೆಯಾಗಿರುತ್ತದೆ. ಸಾಮಾನ್ಯ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಯಥಾಸ್ಥಿತಿಯಲ್ಲಿವೆ. ಪ್ರಮುಖವಾಗಿ HPCL ನ ‘ಪವರ್’ ಮತ್ತು IOCL ನ ‘XP95’ ನಂತಹ ಬ್ರಾಂಡೆಡ್ ಪ್ರೀಮಿಯಂ ಪೆಟ್ರೋಲ್ ಬೆಲೆ ಏರಿಕೆಯಾಗಿದೆ. ದೆಹಲಿಯ ದರಗಳ ಪ್ರಕಾರ, ಸ್ಪೀಡ್ ಪೆಟ್ರೋಲ್ (BS-6) ಬೆಲೆ 2.09 ರೂ. ಏರಿಕೆಯಾಗಿ 112.92 ರೂ. ತಲುಪಿದೆ. ಸಾಮಾನ್ಯ ಪೆಟ್ರೋಲ್ (BS-6) ಬೆಲೆ 103.81 ರೂ. ನಲ್ಲಿದ್ದು, ಡೀಸೆಲ್ ಬೆಲೆ ಲೀಟರ್ಗೆ 90.35 ರೂ. ನಲ್ಲಿದೆ.

