ಅಡಿಕೆಯಲ್ಲಿ ಹಿಂಗಾರು ಒಣಗುತ್ತಿದೆಯೇ??? ಇಲ್ಲಿದೆ ಸಂಪೂರ್ಣ ಮಾಹಿತಿ…
Follow us
ಅಡಿಕೆಯಲ್ಲಿ ಸಿಂಗಾರ/ಹಿಂಗಾರ ಒಣಗು ರೋಗದ ನಿರ್ವಹಣೆ

ಅಡಿಕೆಯು ಭಾರತ ದೇಶದ ಒಂದು ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಅಡಿಕೆ ಉತ್ಪನ್ನದಲ್ಲಿ ಭಾರತವು ಸ್ವಾವಲಂಬಿಯಾಗಿದ್ದು, ಪ್ರಸ್ತುತ ಕರ್ನಾಟಕದ 25 ಜಿಲ್ಲೆಗಳಲ್ಲಿ 5.0 ಲಕ್ಷ ಹೆಕ್ಟರ್ ಪ್ರದೇಶದಿಂದ 9.05 ಲಕ್ಷ ಟನ್ ಉತ್ಪಾದನೆ ಆಗುತ್ತಿದ್ದು ಭಾರತದ ಒಟ್ಟು ಉತ್ಪಾದನೆಯ ಶೇ.65 ರಷ್ಟು ಅಡಿಕೆ ಬೆಳೆ ಕರ್ನಾಟಕದಲ್ಲಿ ಉತ್ಪಾದನೆಯಾಗುತ್ತಿದೆ. ನಂತರದ ಸ್ಥಾನವನ್ನು ಕ್ರಮವಾಗಿ ಕೇರಳ ಹಾಗೂ ಅಸ್ಸಾಂ ರಾಜ್ಯಗಳು ಪಡೆದುಕೊಂಡಿವೆ. ಇತ್ತೀಚಿನ ದಿನಗಳಲ್ಲಿ ಅಡಿಕೆಗೆ ರೋಗಗಳ ಬಾಧೆಯಿಂದ ಇಳುವರಿ ಕುಂಠಿತವಾಗುತ್ತಿದ್ದು. ಅವುಗಳ ನಿರ್ವಹಣಾ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ.
ಈ ರೋಗವು ಕರ್ನಾಟಕದ ಎಲ್ಲಾ ಅಡಿಕೆ ಬೆಳೆಯುವ ಪ್ರದೇಶಗಳಲ್ಲಿ ಕಂಡುಬರುತ್ತದೆ. ಈ ರೋಗವು ಇಳುವರಿಯಲ್ಲಿಶೇಕಡ 10 ರಿಂದ 60 ರಷ್ಟು ನಷ್ಟವನ್ನುಂಟುಮಾಡುತ್ತದೆ. ಈ ರೋಗವು ಕೊಲ್ಲೆಟೋಟ್ರೈಕಮ್ ಗ್ಲಿಯೊಸ್ಪೋರಿಯಾಡಿಸ್ ಎಂಬ ಶೀಲೀಂದ್ರದಿಂದ ಉಂಟಾಗುತ್ತದೆ. ಈ ರೋಗವು ವರ್ಷದ ಎಲ್ಲಾ ತಿಂಗಳುಗಳಲ್ಲಿ ಕಂಡು ಬಂದರು ಸಹ, ಇದರ ಬಾಧೆಯು ಫೆಬ್ರವರಿ-ಮೇ ತಿಂಗಳುಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ
ರೋಗದ ಲಕ್ಷಣಗಳು
ಮೊದಲಿಗೆ ಸಿಂಗಾರವು ಶಿಲೀಂದ್ರದ ಸೋಂಕಿಗೆ ಒಳಗಾದಾಗ ಸಿಂಗಾರದ ಎಸಳುಗಳು ಪ್ರಾರಂಭದಲ್ಲಿ ತುದಿಯಿಂದ ಬುಡದ ಕಡೆಗೆ ಹಳದಿಬಣ್ಣಕ್ಕೆ ತಿರುಗಿ ನಂತರ ಒಣಗುವವು, ಇಂತಹ ಸತ್ತ ಹಿಂಗಾರಗಳು ಜೋತು ಬಿದ್ದು ಕಾಂಡಕ್ಕೆಅಂಟಿಕೊಂಡಿರುತ್ತವೆ. ಮುಂದುವರೆದು ರೋಗ ಉಲ್ಬಣಗೊಂಡಾಗ ಹಾಗೂ ರೋಗಾಣುವು ಇಡೀ ಹಿಂಗಾರಕ್ಕೆ ಆವರಿಸಿದಾಗ ಹಿಂಗಾರಗಳು ಕಂದುಅಥವಾ ಕಪ್ಪು ಬಣ್ಣಕ್ಕೆ ತಿರುಗಿ ಒಣಗುತವೆ.ಇದರಿಂದಾಗಿ ಹೆಣ್ಣು ಹೂಗಳು ಮತ್ತು ಎಳೆಯ ಕಾಯಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಉದುರುತ್ತವೆ. ಈ ಸಮಸ್ಯೆಯಿಂದ ಬೆಳೆಯನ್ನು_ ಉಳಿಸಿಕೊಳ್ಳಲು ರೈತರಿಗೆ ಈ ಕೆಳಕಂಡ ಕ್ರಮಗಳನ್ನು_ ಕೈಗೊಳ್ಳಲು ಶಿಫಾರಸ್ಸು ಮಾಡಲಾಗಿದೆ.

ರೋಗ ಹರಡಲು ಸೂಕ್ತ ವಾತಾವರಣ
ಮೋಡ ಕವಿದ ವಾತಾವರಣ, ಉಷ್ಣಾಂಶ(25-28′ ಸೆ) ಮತ್ತು ಹೆಚ್ಚಿನ ಆದ್ರತೆ (80-90),ಬಿಟ್ಟು ಬಿಟ್ಟು ಬರುವ ಮಳೆ ಈ ರೋಗ ಹರಡುವುದಕ್ಕೆ ಪೂರಕವಾದ ಅಂಶಗಳು.
ಹತೋಟಿ ಕ್ರಮಗಳು
- ರೋಗ ಪೀಡಿತ ಹಾಗೂ ಒಣಗಿದ ಹಿಂಗಾರಗಳನ್ನು ಗಿಡದಿಂದ ತೆಗೆದು ನಾಶಪಡಿಸುವುದರಿಂದ ರೋಗದ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಯಬಹುದು
- ಮ್ಯಾಂಕೋಜೆಬ್ (3 ಗ್ರಾಂ) ಅಥವಾ ಜೈನೇಬ್ (2 ಗ್ರಾಂ) ಅಥವಾ ಪ್ರೊಪಿನೆಟ್ (2 ಗ್ರಾಂ) ಅಥವಾ ಹೆಕ್ಸಾಕೋನಜೋಲ್ 5 ಇ.ಸಿ ಅಥವಾ 5 ಎಫ್.ಸಿ (1 ಮಿ.ಲಿ)ಯನ್ನು ರಾಳ ಅಥವಾ ಅಂಟಿನ (1ಮಿ.ಲಿ) ಜೊತೆ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಹಿಂಗಾರ ಬಿಡುವ ಸಮಯದಲ್ಲಿ (ತೋಟದಲ್ಲಿ 10-20% ಹಿಂಗಾರಗಳು ಒಣಗಿದ್ದು ಕಂಡು ಬಂದಲ್ಲಿ ಮೊದಲನೇ ಸಿಂಪಡಣೆ ತೆಗೆದುಕೊಳ್ಳಬೇಕು) ಹಾಗೂಸುಮಾರು 20-25 ದಿನಗಳ ನಂತರಮತ್ತೊಂದು ಬಾರಿ ಸಿಂಪಡಿಸಬೇಕು.
- ಶೇ. 0.3ರ ಮ್ಯಾಂಕೋಜೆಬ್ನ್ನು (ಡೈಥ್ ನ್ ಎಂ-45 ಅಥ ವಾ ಇಂಡೋಫಿಲ್ ಎಂ-45) ಗೊಂಚಲು ಅರಳುವ ಸಮಯದಲ್ಲಿ ಹಾಗೂ 20-25 ದಿನಗಳ ಅಂತರದಲ್ಲಿ ಮತ್ತೊಂದು ಬಾರಿ ಸಿಂಪಡಿಸಬೇಕು.
.

