ನಿಮ್ಮ ತೋಟದಲ್ಲಿ ಎಲೆಚುಕ್ಕೆ ರೋಗ ಹೆಚ್ಚಾಗಿದೆಯೇ?? ಹೇಗೆ ನಿರ್ವಹಣೆ ಮಾಡಬೇಕೆಂದು ಯೋಚಿಸುತ್ತಿದ್ದೀರಾ??? ಇಲ್ಲಿದೆ ಸಂಪೂರ್ಣ ಮಾಹಿತಿ…
Follow Us
ಅಡಿಕೆ ಬೆಳೆಯು ಮುಖ್ಯವಾಗಿ ಮಲೆನಾಡು, ಕರಾವಳಿ ಹಾಗೂ ಮೈದಾನ ಪ್ರಾಂತ್ಯದ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಈ ಭಾಗದ ರೈತರ ಜೀವನಾಡಿಯಾಗಿದೆ. ಅಡಿಕೆಗೆ ದೊರೆಯುತ್ತಿರುವ ಹೆಚ್ಚಿನ ಮೌಲ್ಯ ಮತ್ತು ಉತ್ತಮ ಮಾರುಕಟ್ಟೆ ವ್ಯವಸ್ಥೆಯಿಂದಾಗಿ ಹೆಚ್ಚು ಹೆಚ್ಚು ರೈತರು ಅಡಿಕೆ ಕೃಷಿಯೆತ್ತ ಒಲವು ತೋರುತ್ತಿದ್ದಾರೆ. ಪ್ರಸ್ತುತ ಭಾರತದಲ್ಲಿ 7.30 ಲಕ್ಷ ಆಕ್ಟರ್ ಪ್ರದೇಶದಿಂದ 9. 02 ಲಕ್ಷ ಟನ್ ಅಡಿಕೆ ಉತ್ಪಾದನೆಯಾಗುತ್ತಿದ್ದು. ಭಾರತದಲ್ಲಿ ಅತಿ ಹೆಚ್ಚು ಅಡಿಕೆಯನ್ನು ಕರ್ನಾಟಕದಲ್ಲಿ ಬೆಳೆಯಲಾಗುತ್ತಿದ್ದು (65% ರಷ್ಟು) ನಂತರದ ಸ್ಥಾನದಲ್ಲಿ ಕೇರಳ ಮತ್ತು ಅಸ್ಸಾಂ ರಾಜ್ಯಗಳಿವೆ. ಅಡಿಕೆ ಬೆಳೆಯು ಹಲವಾರು ರೋಗಗಳಿಗೆ ತುತ್ತಾಗುತ್ತಿದ್ದು, ಈ ಹಿಂದೆ ಅಡಿಕೆ ಬೆಳೆಯಲ್ಲಿ ಕಡಿಮೆ ಹಾನಿ ಉಂಟು ಮಾಡುತ್ತಿದ್ದ ರೋಗಗಳು ಇತ್ತೀಚಿನ ವರ್ಷಗಳಲ್ಲಿ ವಾತಾವರಣದಲ್ಲಿ ಉಂಟಾಗುತ್ತಿರುವ ವೈಪರಿತ್ಯದಿಂದಾಗಿ ಅವುಗಳ ಸಂತತಿ ತೀವ್ರ ವೇಗವಾಗಿ ಅಭಿವೃದ್ಧಿ ಹೊಂದಿ ಹೆಚ್ಚಿನ ಹಾನಿ ಉಂಟು ಮಾಡುತ್ತಿವೆ. ಅವುಗಳಲ್ಲಿ ಎಲೆ ಚುಕ್ಕೆ ರೋಗವು ಪ್ರಮುಖವಾಗಿದ್ದು, ಮಲೆನಾಡಿನಲ್ಲಿಡೆ ವ್ಯಾಪಕವಾಗಿ ಹರಡುತ್ತಿರುವುದು, ಈ ಭಾಗದ ಬೆಳೆಗಾರರಲ್ಲಿ ಹೆಚ್ಚು ಆತಂಕಕ್ಕೆ ಕಾರಣವಾಗುತ್ತಿದೆ. ಈ ರೋಗದಿಂದಾಗಿ ಅಡಿಕೆ ಇಳುವರಿ ಕುಂಠಿತವಾಗುತ್ತಿದ್ದು, ನಿರ್ದಿಷ್ಟ ಅವಧಿಯಲ್ಲಿ ಸರಿಯಾದ ನಿರ್ವಹಣೆ ಕ್ರಮಗಳನ್ನು ಅಳವಡಿಸಿಕೊಂಡಿದ್ದೆ ಆದಲ್ಲಿ, ಈ ರೋಗದ ಬಾಧೆ ಹಾಗೂ ಹರಡುವಿಕೆಯನ್ನು ಸಂಪೂರ್ಣವಾಗಿ ತಡೆಗಟ್ಟಬಹುದು ಆದ್ದರಿಂದ ಈ ರೋಗದ ಲಕ್ಷಣಗಳು, ಹರಡುವಿಕೆ ಮತ್ತು ತೆಗೆದುಕೊಳ್ಳಬೇಕಾದ ನಿರ್ವಹಣೆ ಕ್ರಮಗಳನ್ನು ಈ ಕೆಳಗೆ ವಿವರಿಸಲಾಗಿದೆ.
ರೋಗಕಾರಕಗಳು
ಶಿಲೀಂದ್ರ ಸೂಕ್ಷ್ಮಣ ಜೀವಿಗಳಾದ ಕೊಲೆಕೊಟ್ರೈಕಂ ಗ್ಲಿಯೊಸ್ಪೊರೈಡ್ಸ್ , ಫಿಲ್ಲೊಸ್ಟಿಕ್ಟಾ ಅರಕೆ ಮತ್ತು ಪೇಸ್ಟಲೋಸಿಯಾಪ್ಸಿಸ್ ಅರೆಕೆಯಿಂದ ಈ ರೋಗ ಉಂಟಾಗುತ್ತದೆ.
ರೋಗದ ಲಕ್ಷಣಗಳು:
- ಕೊಲೆಕೊಟ್ರೈಕಂ ಶಿಲೀಂದ್ರ ಗರಿಗಳ ಮೇಲೆ ಹಳದಿ ಮತ್ತು ಕಪ್ಪು ಬಣ್ಣದ ಚಿಕ್ಕ ಗಾತ್ರದ ಚುಕ್ಕೆಗಳನ್ನು ಉಂಟುಮಾಡುತ್ತದೆ ಹಾಗೂ ಗರಿಗಳು ತುದಿಯಿಂದ ಒಣಗಲು ಪ್ರಾರಂಭಿಸುತ್ತವೆ.
- ಫಿಲ್ಲೊಸ್ಟಿಕ್ಟಾ ಶಿಲೀಂದ್ರ ಮರಗಳ ಸ್ಲೋಗಗಳ ಮೇಲ್ಬಾಗದಲ್ಲಿ ದೊಡ್ಡ ಗಾತ್ರದ ಬೂದಿ ಮಿಶ್ರಿತ ಬಿಳಿ ಬಣ್ಣದ ಚುಕ್ಕೆಗಳು ಕಂಡುಬಂದು ಅವುಗಳ ಅಂಚು ಕಂಡು ಮತ್ತು ಕಪ್ಪು ಬಣ್ಣದ ಚುಕ್ಕೆಗಳ ರೂಪದಲ್ಲಿ ಕಾಣಿಸುತ್ತವೆ.
- ಪೇಸ್ಟಲೋಷಿಯ ಬಾದಿತ ಗರಿಗಳ ಮೇಲೆ ನಸ್ಸು ಹಳದಿ ಬಣ್ಣದ ಚುಕ್ಕೆಗಳು ಕಾಣಿಸುತ್ತವೆ.
- ಈ ಚುಕ್ಕೆಗಳು ಕೆಳಗಿನ ಎಲೆಗಳಿಂದ ಪ್ರಾರಂಭವಾಗಿ ಶೀಘ್ರವಾಗಿ ಒಂದಕ್ಕೊಂದು ಕೂಡಿಕೊಂಡು ಪೂರ್ತಿ ಹೆಡೆಗಳನ್ನು ಆವರಿಸುತ್ತವೆ.
- ರೋಗ ಉಲ್ಬಣಗೊಂಡಾಗ ಹೆಡೆಗಳು ಒಣಗಲಾರಂಭಿಸುತ್ತವೆ ಇಂತಹ ಒಣಗಿದ ಎಲ್ಲಾ ಹೆಡೆಗಳು ಕಾಂಡಕ್ಕೆ ಜೋತು ಬಿದ್ದು ಮರ ಶಕ್ತಿ ಕಳೆದುಕೊಂಡು ಇಳುವರಿ ಕುಂಟಿತಗೊಳ್ಳುತ್ತದೆ.

ರೋಗಕ್ಕೆ ಪೂರಕವಾದ ಅಂಶಗಳು
ಶಿಲೀಂದ್ರವು ರೋಗ ಗ್ರಸ್ತ ಗರಿಗಳಲ್ಲಿ ವಾಸಿಸುವುದು ಮಳೆ ಹನಿಗಳ ಚಿಮ್ಮುವಿಕೆಯಿಂದ ಶಿಲೀಂದ್ರದ ಕಣಗಳು ಗಾಳಿಯಲ್ಲಿ ಸೇರಿ ಹೊಸ ಗರಿಗಳನ್ನು ತಲುಪುತ್ತವೆ. ಹಾಗೆಯೆ ತೇವ ಭರಿತ ಬಿಸಿಲಿನ ವಾತಾವರಣ, ಕಡಿಮೆ ಉಷ್ಣಾಂಶ (180 ರಿಂದ 240 ಸೆ) ಮತ್ತು ಹೆಚ್ಚಿನ ಆದ್ರತೆ (>85%) ಈ ರೋಗದ ತೀವ್ರತೆ ಮತ್ತು ಹರಡುವಿಕೆಗೆ ಪೂರಕವಾದ ಅಂಶಗಳಾಗಿರುತ್ತವೆ. ರೋಗವು ವರ್ಷ ಪೂರ್ತಿ ಕಂಡು ಬಂದರು ಸಹ ಮಾರ್ಚ್ ನಿಂದ ಸೆಪ್ಟೆಂಬರ್ ತಿಂಗಳವರೆಗೂ ಹೆಚ್ಚಾಗಿ ಬಾದೆಯನ್ನು ಉಂಟುಮಾಡುತ್ತದೆ.
ನಿರ್ವಹಣೆ
- ರೋಗಭಾದಿತ ಒಣಗಿದ ಗರಿಗಳನ್ನು ಕತ್ತರಿಸಿ ತೆಗೆದು ನಾಶಪಡಿಸುವುದರಿಂದ ರೋಗಾಣುವಿನ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಯಬಹುದು.
- ಬಿಸಿಲು ಬೀಳುವಂತೆ ಮಾಡಲು ಅಂತರ ಬೆಳೆಗಳ ಅಥವಾ ಕಾಡು ಮರಗಳ ಹೆಚ್ಚುವರಿ ರೆಂಬೆಗಳನ್ನು ಕತ್ತರಿಸಿ ತೆಗೆಯುವುದು.
- ಮರಗಳ ಉತ್ತಮ ಬೆಳವಣಿಗೆ ಕೊಟ್ಟಿಗೆ ಗೊಬ್ಬರದ ಜೊತೆಗೆ ಸಾರಜನಕ:ರಂಜಕ:ಪೊಟ್ಯಾಷ್ (100:40:140 ಗ್ರಾಂ ಪ್ರತಿ ಮರಕ್ಕೆ) ನೀಡಬೇಕು.
ಶಿಲೀಂದ್ರನಾಶಕಗಳು
- ರೋಗ ಲಕ್ಷಣದ ಪ್ರಾರಂಭದಲ್ಲಿ ಮುಂಜಾಗ್ರತಾ ಕ್ರಮವಾಗಿ ಮ್ಯಾಂಕೊಜೆಬ್ (2.5 ಗ್ರಾಂ ) ಅಥವಾ ಸಾಫ್ (ಮ್ಯಾಂಕೊಜೆಬ್ 63%+ ಕಾರ್ಬನ್ ಡೈಜಿಮ್ 2% ಸಂಯುಕ್ತ) 2 ಗ್ರಾಂ ಜೊತೆಗೆ ಅಂಟು ದ್ರಾವಣ (1 ಮೀ.ಲೀ,) ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
- ಶೇ 1 ರ ಬೋರ್ಡೋ ದ್ರಾವಣ ಅಥವಾ ಶೇ 0.3 ತಾಮ್ರದ ಆಕ್ಸಿಕ್ಲೋರೈಡ್ ಶಿಲೀಂದ್ರ ನಾಶಕಗಳನ್ನು 1 ಮೀ ಲೀ, ಅಂಟು ದ್ರಾವಣ ಜೊತೆ ಬೆರೆಸಿ ಸಿಂಪಡಿಸುವುದು
- ಹೆಕ್ಸಕೋನಝೋಲ್ 5% ಎಸ್.ಸಿ./ಇ.ಸಿ. ಅಥವಾ ಪ್ರೋಪಿಕೋನಜೋಲ್ 25% ಅಂತರ್ ವ್ಯಾಪಿ ಶಿಲೀಂದ್ರ ನಾಶಕಗಳನ್ನು 1 ಮೀ ಲೀ ಜೊತೆಗೆ ಅಂಟು ದ್ರಾವಣ (1 ಮೀ ಲೀ )ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು
- ರೋಗದ ಭಾದೆಯು ಅಂತರ ಬೆಳೆಯಾದ ಕಾಳಮೆಣಸು ಬೆಳಗು ಸಹ ಹರಡುವುದರಿಂದ ಇವುಗಳಿಗೂ ಸಹ ಸಿಂಪಡಣೆ ಮಾಡಬೇಕು.
- ರೋಗ ಮತ್ತೆ ಕಾಣಿಸಿಕೊಂಡಲ್ಲಿ ಮೇಲೆ ತಿಳಿಸಿದ ಯಾವುದಾದರೂ ಒಂದು ಶಿಲೀಂದ್ರ ನಾಶಕಗಳನ್ನು 20-25 ದಿನಗಳ ಅಂತರದಲ್ಲಿ ಪುನರಾವರ್ತಿಸಬೇಕು.
ಇನ್ನು ಅನೇಕ ಅಡಿಕೆಯಲ್ಲಿ ಬರುವ ರೋಗ ಹಾಗೂ ಕೀಟಗಳ ಬಗ್ಗೆ ಮಾಹಿತಿಗಾಗಿ ಲೈಕ್ ಮಾಡಿ ಶೇರ್ ಮಾಡಿ ಕಮೆಂಟ್ ಮಾಡಿ ಹಾಗೂ ಪ್ರತಿ ದಿನ ನಮ್ಮ ಪೇಜ್ ನಾ ಫಾಲೋ ಮಾಡಿ.

