Ration Card:ಕೇಂದ್ರ ಸರ್ಕಾರದಿಂದ ಪಡಿತರ ಚೀಟಿದಾರರಿಗೆ ಸಿಹಿ ಸುದ್ದಿ..

ಮುಂಬರುವ ಏಪ್ರಿಲ್ ತಿಂಗಳಿನಿಂದಲೇ ಅನ್ವಯ ಆಗುವಂತೆ ಮುಂದಿನ ಮೂರು ತಿಂಗಳ ಪಡಿತರವನ್ನು ಒಟ್ಟಿಗೇ ವಿತರಿಸಲು ಮಹತ್ವದ ನಿರ್ಧಾರ ಕೈಗೊಂಡಿದೆ. ಹಾಗಾದ್ರೆ, ಯಾವೆಲ್ಲಾ ರೇಷನ್ ಕಾರ್ಡ್ದಾರರು ಈ ಸೌಲಭ್ಯಕ್ಕೆ ಅರ್ಹರು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಸಾಮಾನ್ಯವಾಗಿ ಪ್ರತಿ ತಿಂಗಳು ಪಡಿತರ ಪಡೆಯಲು ನ್ಯಾಯಬೆಲೆ ಅಂಗಡಿಗಳಿಗೆ ಅಲೆಯಬೇಕಿತ್ತು. ಆದರೆ, 2026ರ ಏಪ್ರಿಲ್ ತಿಂಗಳ ಪಡಿತರ ವಿತರಣೆಯ ವೇಳೆಯೇ ಮೇ ಮತ್ತು ಜೂನ್ ತಿಂಗಳ ಪಾಲನ್ನು ಸಹ ಫಲಾನುಭವಿಗಳಿಗೆ ನೀಡಲಾಗುವುದು. ಅಂದರೆ, ಏಪ್ರಿಲ್ನಲ್ಲಿ ನೀವು ಒಟ್ಟು ಮೂರು ತಿಂಗಳ ಆಹಾರ ಧಾನ್ಯಗಳನ್ನು ಒಟ್ಟಿಗೇ ಮನೆಗೆ ಕೊಂಡೊಯ್ಯಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಯಾರಿಗೆಲ್ಲ ಸಿಗಲಿದೆ ಈ ಸೌಲಭ್ಯ?
ಈ ಸೌಲಭ್ಯ ಕೆಳಗಿನ ಪಡಿತರ ಚೀಟಿ ಹೊಂದಿರುವವರಿಗೆ ಅನ್ವಯಿಸುತ್ತದೆ 👇
ಅಂತ್ಯೋದಯ ಅನ್ನ ಯೋಜನೆ (AAY): ಅತ್ಯಂತ ಬಡ ಕುಟುಂಬಗಳಿಗೆ ಈ ಸೌಲಭ್ಯ ದೊರೆಯುತ್ತದೆ.
ಬಿಪಿಎಲ್ / ಆದ್ಯತಾ ಪಡಿತರ ಚೀಟಿ (PHH): ಬಿಪಿಎಲ್ ಕಾರ್ಡ್ ಹೊಂದಿರುವ ಎಲ್ಲಾ ಅರ್ಹ ಕುಟುಂಬಗಳು ಇದರ ಲಾಭ ಪಡೆಯಬಹುದು.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PMGKAY): ಈ ಯೋಜನೆಯಡಿ ಉಚಿತ ಪಡಿತರ ಪಡೆಯುವವರಿಗೂ ಈ ಸೌಲಭ್ಯ ಅನ್ವಯಿಸುತ್ತದೆ.
ಸರ್ಕಾರವು ಈ ನಿರ್ಧಾರ ಮಾಡಲು ಕಾರಣ??
* ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸಾಲು ಸಾಲು ಹಬ್ಬಗಳು ಬರುವುದರಿಂದ ಬಡ ಕುಟುಂಬಗಳಿಗೆ ಧಾನ್ಯದ ಕೊರತೆಯಾಗಬಾರದು ಎಂಬ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
* ಮಾರುಕಟ್ಟೆಯಲ್ಲಿ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗುತ್ತಿರುವ ಬೆನ್ನಲ್ಲೇ, ಬಡವರು ಮುಂಚಿತವಾಗಿಯೇ ಧಾನ್ಯ ಸಂಗ್ರಹಿಸಿಟ್ಟುಕೊಳ್ಳಲು ಇದು ಸಹಕಾರಿಯಾಗಲಿದೆ ಎಂದು ತಿಳಿಸಿದೆ.
* ಏಪ್ರಿಲ್ ನಂತರ ಬಿಸಿಲಿನ ಪ್ರಮಾಣ ಹೆಚ್ಚಾಗುವುದರಿಂದ ಜನರು ಪದೇ ಪದೇ ರೇಷನ್ ಅಂಗಡಿಗಳ ಮುಂದೆ ಸಾಲು ನಿಲ್ಲುವುದನ್ನು ತಪ್ಪಿಸಲು ಈ ಕ್ರಮ.
ಫಲಾನುಭವಿಗಳು ಪಡಿತರ ಪಡೆಯಲು ಎಂದಿನಂತೆ ತಮ್ಮ ಆಧಾರ್ ಕಾರ್ಡ್ ಮತ್ತು ಬಯೋಮೆಟ್ರಿಕ್ (ಹೆಬ್ಬೆಟ್ಟಿನ ಗುರುತು) ನೀಡುವುದು ಕಡ್ಡಾಯವಾಗಿದೆ. ನಿಮ್ಮ ಸಮೀಪದ ನ್ಯಾಯಬೆಲೆ ಅಂಗಡಿಗಳಲ್ಲಿ ಈ ಸೌಲಭ್ಯ ಲಭ್ಯವಿರಲಿದ್ದು, ಏಪ್ರಿಲ್ ಮೊದಲ ವಾರದಿಂದಲೇ ವಿತರಣೆ ಆರಂಭವಾಗುವ ಸಾಧ್ಯತೆಯಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

