PM Kisan 22ನೇ ಕಂತಿನ ಬಿಡುಗಡೆ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-Kisan) ಯೋಜನೆಯಡಿ ರೈತರಿಗೆ ನೀಡಲಾಗುವ 22ನೇ ಕಂತಿನ ಹಣದ ಬಗ್ಗೆ ಮಹತ್ವದ ಅಷ್ಟೇಟ್ ಹೊರಬಂದಿದ್ದು, ಈ ಯೋಜನೆಯಡಿ ದೇಶದ ಕೋಟ್ಯಂತರ ರೈತರಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ.

22ನೇ ಕಂತಿನ ಹಣ ಯಾವಾಗ?

ಇತ್ತೀಚಿನ ವರದಿಗಳ ಪ್ರಕಾರ, ಪಿಎಂ ಕಿಸಾನ್ ಯೋಜನೆಯ 22ನೇ ಕಂತಿನ ₹2,000 ಹಣವನ್ನು ಮಾರ್ಚ್ 13ರ ವೇಳೆಗೆ ರೈತರ ಖಾತೆಗೆ ಜಮೆ ಮಾಡಲಾಗಿದೆ.

ಹಿಂದಿನ ಕಂತಿನ ವಿವರ :

ಪಿಎಂ ಕಿಸಾನ್ ಯೋಜನೆಯ 21ನೇ ಕಂತಿನ ಹಣವನ್ನು 2025ರ ನವೆಂಬರ್ 19ರಂದು ಬಿಡುಗಡೆ ಮಾಡಲಾಗಿತ್ತು. ಅದಾದ ಬಳಿಕ ಈಗ ರೈತರು 22ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ.

ಹಣ ಪಡೆಯಲು ರೈತರು ಮಾಡಬೇಕಾದ ಕೆಲಸಗಳು:

1. e-KYC ಪೂರ್ಣಗೊಳಿಸಬೇಕು ಬ್ಯಾಂಕ್‌ ಖಾತೆ ಆಧಾರ್‌ಗೆ ಲಿಂಕ್ ಆಗಿರಬೇಕು.

    2. ಭೂ ದಾಖಲೆಗಳ ಪರಿಶೀಲನೆ (Land verification) ಸರಿಯಾಗಿರಬೇಕು.

    3. ಫಲಾನುಭವಿಗಳ ಪಟ್ಟಿಯಲ್ಲಿ ಹೆಸರು ಇರಬೇಕು.

    PM Kisan Beneficiary Status – ಹೇಗೆ ಪರಿಶೀಲಿಸಬೇಕು

    Status ಚೆಕ್ ಮಾಡುವ ವಿಧಾನ:

    • ಅಧಿಕೃತ ವೆಬ್‌ಸೈಟ್ pmkisan.gov.in ಗೆ ಭೇಟಿ ನೀಡಿ
    • Farmers Corner ಮೇಲೆ ಕ್ಲಿಕ್ ಮಾಡಿ
    • Know Your Status ಆಯ್ಕೆಮಾಡಿ
    • ನಿಮ್ಮ Registration Number ನಮೂದಿಸಿ
    • Captcha code ನಮೂದಿಸಿ
    • ನಿಮ್ಮ ಮೊಬೈಲ್‌ಗೆ ಬಂದ OTP ಅನ್ನು ಹಾಕಿ
    • ನಂತರ ನಿಮ್ಮ ಕಂತಿನ ಸ್ಥಿತಿ ಮತ್ತು ಪಾವತಿ ಇತಿಹಾಸ ಕಾಣಿಸುತ್ತದೆ.

    ರೈತರು ತಮ್ಮ ವಿವರಗಳನ್ನು ಈ ಕೆಳಗಿನ ಮೂಲಕವೂ ನೋಡಬಹುದು:

    • ಆಧಾರ್ ಸಂಖ್ಯೆ (Aadhaar Number)
    • ಮೊಬೈಲ್ ಸಂಖ್ಯೆ (Mobile Number)
    • ನೋಂದಣಿ ಸಂಖ್ಯೆ (Registration Number)

    ಹಣ ಬರದಿದ್ದರೆ ಕಾರಣಗಳು

    • eKYC ಪೂರ್ಣಗೊಳಿಸಿಲ್ಲ
    • ಬ್ಯಾಂಕ್ ವಿವರಗಳಲ್ಲಿ ತಪ್ಪು
    • ಭೂ ದಾಖಲೆ (land records) ಸಮಸ್ಯೆ
    • ಅರ್ಹತೆ ಇಲ್ಲದವರ ಹೆಸರು ಲಿಸ್ಟ್‌ನಿಂದ ತೆಗೆದುಹಾಕಲಾಗಿದೆ.

    Leave a Reply

    Your email address will not be published. Required fields are marked *