ದೇಶದ 2027ರ ರಾಷ್ಟ್ರೀಯ ಜನಗಣತಿ ಪ್ರಕ್ರಿಯೆ ಇಂದು ಏಪ್ರಿಲ್ 1, 2026ರಿಂದ ಅಧಿಕೃತವಾಗಿ ಪ್ರಾರಂಭವಾಗಿದೆ. ಇದು ವಿಶ್ವದ ಅತಿದೊಡ್ಡ ಜನಗಣತಿ ಅಭಿಯಾನವಾಗಿದೆ

ಜನಗಣತಿ ಬಗ್ಗೆ ಮುಖ್ಯ ಮಾಹಿತಿ
2027ರ ಜನಗಣತಿ ಎರಡು ಹಂತಗಳಲ್ಲಿ ನಡೆಯುತ್ತದೆ
ಮೊದಲ ಹಂತ (2026): ಮನೆಗಳ ಪಟ್ಟಿ, ಮನೆ ಸೌಲಭ್ಯ ಮಾಹಿತಿ
ಎರಡನೇ ಹಂತ (2027): ಜನಸಂಖ್ಯೆ ಎಣಿಕೆ
ಇದೇ ಮೊದಲ ಬಾರಿಗೆ ಪೂರ್ಣ ಡಿಜಿಟಲ್ ಜನಗಣತಿ ನಡೆಯುತ್ತಿದೆ
ಜನರು ಆನ್‌ಲೈನ್ ಸ್ವಯಂ ಗಣತಿ (Self Enumeration) ಕೂಡ ಮಾಡಬಹುದು
ಯಾವುದೇ ದಾಖಲೆಗಳನ್ನು ಕೊಡಬೇಕಾಗಿಲ್ಲ
30 ಲಕ್ಷಕ್ಕೂ ಹೆಚ್ಚು ಸಿಬ್ಬಂದಿ ಈ ಕಾರ್ಯದಲ್ಲಿ ಭಾಗವಹಿಸುತ್ತಾರೆ
ವೇಳಾಪಟ್ಟಿ
ಹಂತ ಸಮಯ
ಮನೆ ಪಟ್ಟಿ / Housing Census ಏಪ್ರಿಲ್ 1 – ಸೆಪ್ಟೆಂಬರ್ 2026
ಜನಸಂಖ್ಯೆ ಎಣಿಕೆ ಫೆಬ್ರವರಿ – ಮಾರ್ಚ್ 2027
ಸಾರ್ವಜನಿಕರು ಏಪ್ರಿಲ್ 1 ರಿಂದ ಏಪ್ರಿಲ್ 15ರವರೆಗೆ ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು. ಸರ್ಕಾರದ ಅಧಿಕೃತ ವೆಬ್‌ಸೈಟ್ https://se.census.gov.in/ ಗೆ ಭೇಟಿ ನೀಡಿ, ಸರಳವಾದ ಹಂತಗಳನ್ನು ಅನುಸರಿಸುವ ಮೂಲಕ ಕೇವಲ 15 ರಿಂದ 20 ನಿಮಿಷಗಳಲ್ಲಿ ನಿಮ್ಮ ಮನೆಯ ವಿವರಗಳನ್ನು ನೀವೇ ದಾಖಲಿಸಬಹುದು.
ಮನೆಯ ಯಾವುದೇ ಒಬ್ಬ ಸದಸ್ಯರು ಸುಮಾರು 15-20 ನಿಮಿಷಗಳ ಅವಧಿಯಲ್ಲಿ ಸ್ವಯಂ-ಗಣತಿ ಮಾಡಿ ಮನೆಯ ವಿವರಗಳನ್ನು ಒದಗಿಸಬಹುದು ಮತ್ತು ಮೊಬೈಲ್/ಇಮೇಲ್‌ನಲ್ಲಿ ಸ್ವಯಂ-ಗಣತಿ ಐಡಿಯನ್ನು ಪಡೆಯಬಹುದಾಗಿರುತ್ತದೆ. ಜನಗಣತಿ-2027ರ ಎರಡನೇ ಹಂತದಲ್ಲಿ 16ನೇ ಏಪ್ರಿಲ್ 2026 ರಿಂದ 15ನೇ ಮೇ 2026ರ ವರೆಗೆ ಗಣತಿದಾರರು ಮನೆ-ಮನೆಗೆ ಭೇಟಿ ನೀಡಿ ಮನೆಪಟ್ಟಿ ಮತ್ತು ಮನೆ ಗಣತಿ ಮಾಹಿತಿಯನ್ನು ಸಂಗ್ರಹಿಸಲಿದ್ದಾರೆ ಎಂದು ಅವರು ವಿವರಿಸಿದರು.
ಗಣತಿದಾರರು ಮನೆಗೆ ಭೇಟಿ ನೀಡಿದಾಗ, ದೃಢೀಕರಿಸಲು ಮತ್ತು ಸ್ವಯಂ-ಗಣತಿ ದತ್ತಾಂಶದ ಅಂತಿಮ ಸಲ್ಲಿಕೆಗಾಗಿ ಸ್ವಯಂ-ಗಣತಿ ಐಡಿಯನ್ನು ಗಣತಿದಾರರೊಂದಿಗೆ ಹಂಚಿಕೊಳ್ಳಬೇಕಾಗಿರುತ್ತದೆ. ಸ್ವಯಂ ಗಣತಿ ಪ್ರಕ್ರಿಯೆಗಾಗಿ ನಿಗದಿಪಡಿಸಿರುವ ಅವಧಿಯಲ್ಲಿ ನಾಗರಿಕರು ತಮ್ಮ ಮಾಹಿತಿಯನ್ನು ದಾಖಲಿಸಲು ಅವಕಾಶವಿದೆ. ಇದರಿಂದ ಜನಗಣತಿ ಕಾರ್ಯದಲ್ಲಿ ಪಾರದರ್ಶಕತೆ, ವೇಗ ಮತ್ತು ನಿಖರತೆ ಹೆಚ್ಚಲಿದೆ ಎಂದು ಆಯುಕ್ತರು ತಿಲಿಸಿದರು.
ಸಮಗ್ರ ಅಭಿವೃದ್ಧಿಗೆ ಪೂರಕ ಹೆಜ್ಜೆ
ಜನಗಣತಿ 2027ರ ಮಾಹಿತಿಯ ಆಧಾರದ ಮೇಲೆ ಭವಿಷ್ಯದ ನಗರ ಯೋಜನೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ. ಆದ್ದರಿಂದ, ಎಲ್ಲಾ ನಾಗರಿಕರು ಸ್ವಯಂ ಗಣತಿಯಲ್ಲಿ ತಮ್ಮ ಸರಿಯಾದ ಮಾಹಿತಿಯನ್ನು ಒದಗಿಸುವ ಮೂಲಕ ಜನಗಣತಿ ಪ್ರಕ್ರಿಯೆಯಲ್ಲಿ ನಾಗರಿಕರ ಸಹಭಾಗಿತ್ವ ಅತ್ಯಂತ ಅಗತ್ಯವಾಗಿದೆ.

