”ಗಂಗಾ ಕಲ್ಯಾಣ ಯೋಜನೆ” ಅರ್ಜಿ ಸಲ್ಲಿಕೆ ಪ್ರಾರಂಭ

ಈ ಯೋಜನೆ ಸಂಪೂರ್ಣ ಸಬ್ಸಿಡಿ ಯೋಜನೆಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಅಲ್ಪಸಂಖ್ಯಾತರು ಮತ್ತು ಸಣ್ಣ ರೈತರಿಗೆ ಬೋರ್‌ವೆಲ್, ಪಂಪ್‌ಸೆಟ್ ಮತ್ತು ವಿದ್ಯುತೀಕರಣವನ್ನು ಒದಗಿಸಲಾಗುತ್ತದೆ.
ವೈಯಕ್ತಿಕ ಬೋರ್‌ವೆಲ್ ಯೋಜನೆಗಾಗಿ ಸರ್ಕಾರವು ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಮತ್ತು ತುಮಕೂರು ಜಿಲ್ಲೆಗಳಿಗೆ ರೂ. 3.75 ಲಕ್ಷಗಳನ್ನು ಮಂಜೂರು ಮಾಡಿದೆ ಮತ್ತು ಇತರೆ ಜಿಲ್ಲೆಗಳಿಗೆ ರೂ. 2.25 ಲಕ್ಷಗಳನ್ನು ಮಂಜೂರು ಮಾಡಿದೆ.

ಅರ್ಹತೆ (Eligibility) –
1.ಅರ್ಜಿದಾರರು ಸರ್ಕಾರದ ಆದೇಶದಲ್ಲಿ ನಿರ್ದಿಷ್ಟಪಡಿಸಿದ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿರಬೇಕು.
2.ಪ್ರತಿ ಲಾಭಾರ್ಥಿಯು ಕನಿಷ್ಠ 1 ಏಕರೆ 20 ಗುಂಟೆ (1 ಏಕರೆ 50 ಸೆಂಟ್ಸ್) ರಿಂದ 5 ಏಕರೆವರೆಗೆ ಒಣಭೂಮಿ ಹೊಂದಿರಬೇಕು. ಕೊಡಗು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಭೂಮಿಯ ಲಭ್ಯತೆ ಕಡಿಮೆ ಇರುವುದರಿಂದ ಕನಿಷ್ಠ 1 ಏಕರೆ ಭೂಮಿ ಇದ್ದರೆ ಸಾಕು.
3.ಅರ್ಜಿದಾರರು ಕರ್ನಾಟಕ ರಾಜ್ಯದ ಶಾಶ್ವತ ನಿವಾಸಿಗಳಾಗಿರಬೇಕು.
4.ಅರ್ಜಿದಾರರು ಸಣ್ಣ / ಅತಿ ಸಣ್ಣ ಬಾಡಿಗೆ ರೈತರಾಗಿರಬೇಕು.
5.ಕುಟುಂಬದ ಎಲ್ಲಾ ಮೂಲಗಳಿಂದ ವಾರ್ಷಿಕ ಆದಾಯ ರೂ. 6.00 ಲಕ್ಷ ಮೀರಬಾರದು.
6.ಅರ್ಜಿದಾರರ ಕನಿಷ್ಠ ವಯಸ್ಸು 18 ವರ್ಷ ಇರಬೇಕು. ಅರ್ಜಿದಾರರ ಗರಿಷ್ಠ ವಯಸ್ಸಿನ ಮಿತಿ 55 ವರ್ಷ ರದ್ದುಪಡಿಸಲಾಗಿದೆ.

ಅಗತ್ಯ ದಾಖಲೆಗಳು (Documents) –
1.ಅರ್ಹ ಅಧಿಕಾರಿಯಿಂದ ನೀಡಲಾದ ಜಾತಿ ಪ್ರಮಾಣ ಪತ್ರ
2.ಅರ್ಹ ಅಧಿಕಾರಿಯಿಂದ ನೀಡಲಾದ ಆದಾಯ ಪ್ರಮಾಣ ಪತ್ರ
3.ಆಧಾರ್ ಕಾರ್ಡ್ ಪ್ರತಿಯನ್ನು (ನಿವಾಸದ ಪ್ರಮಾಣವಾಗಿ)
4.ಇತ್ತೀಚಿನ RTC (ಪಹಾಣಿ) ನಕಲು
5.ಸಣ್ಣ / ಅತಿ ಸಣ್ಣ ರೈತ ಪ್ರಮಾಣ ಪತ್ರ (ಅರ್ಹ ಅಧಿಕಾರಿಯಿಂದ ನೀಡಲ್ಪಟ್ಟ)
6.ಬ್ಯಾಂಕ್ ಪಾಸ್‌ಬುಕ್ ಪ್ರತಿಯನ್ನು
7.ಭೂಮಿಯ ತೆರಿಗೆ ಪಾವತಿ ರಶೀದಿ
8.ಸ್ವಯಂ ಘೋಷಣಾ ಪತ್ರ (Self Declaration Letter)
9.ಜಾಮೀನುದಾರರ ಸ್ವಯಂ ಘೋಷಣಾ ಪತ್ರ

”ಗಂಗಾ ಕಲ್ಯಾಣ ಯೋಜನೆ” Ganga Kalyana Scheme Apply Online 2026
ನಮ್ಮ ಕರ್ನಾಟಕ ಸರ್ಕಾರ ಜಾರಿ ತಂದಿರುವ ಯೋಜನೆಯ ಬಗ್ಗೆ ಕೆಲವೇ ಕೆಲವು ಜನಮಾನ್ಯರಿಗೆ ಮಾತ್ರನೇ ತಿಳಿದಿರುತ್ತದೆ ಹಾಗಾಗಿ ಈ ಒಂದು ಸಾಮಾಜಿಕ ಜಾಲತಾಣದ ಮೂಲಕ ಪ್ರತಿಯೊಬ್ಬರಿಗೂ ತಲುಪಿಸುವ ನಮ್ಮದೊಂದು ಸಣ್ಣ ಪ್ರಯತ್ನ.

ಗಂಗಾ ಕಲ್ಯಾಣ ಯೋಜನೆ ಎಂಬುದು ನಮ್ಮ ಕರ್ನಾಟಕ ಸರ್ಕಾರದ ಒಂದು ಪ್ರಮುಖ ನೀರಾವರಿ ಯೋಜನೆಯಾಗಿದೆ. ಸರಳವಾಗಿ ಹೇಳುವುದಾದರೆ, ಕೃಷಿ ಭೂಮಿ ಇದ್ದರೂ ನೀರಾವರಿ ಸೌಲಭ್ಯವಿಲ್ಲದ ಬಡ ರೈತರಿಗೆ ಸರ್ಕಾರವೇ ಉಚಿತವಾಗಿ ಅಥವಾ ಹೆಚ್ಚಿನ ಸಬ್ಸಿಡಿಯೊಂದಿಗೆ ಬೋರ್ವೆಲ್ ಕೊರೆಸಿಕೊಡುವ ಪ್ರಮುಖ ಯೋಜನೆಯಾಗಿದೆ.

ನಾನ್ನದೆ ಆದ ಸ್ವಂತ ಮಾತಿನಲ್ಲಿ ಹೇಳುವುದಾದರೆ ಆರ್ಥಿಕವಾಗಿ ಹಿಂದುಳಿದ ರೈತರಿಗೆ ಬೆಂಬಲ ಸಿಗಬೇಕು, ಕರ್ನಾಟಕದಲ್ಲಿ ರೈತರು ಕಷ್ಟಪಟ್ಟು ಬೆಳೆದ ಬೆಳೆಗಳು ಮಳೆ ಇಲ್ಲದ ಕಾರಣದಿಂದಾಗಿ ನಾಶವಾಗುತ್ತವೆ ಇಂದರಿಂದ ಅವ್ರು ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಾರೆ ಎಂಬದು ಈ ಯೋಜನೆಯ ಉದ್ದೇಶವನ್ನು ಹೊಂದಿದೆ.

ಯೋಜನೆಯ ಉದ್ದೇಶ: Ganga Kalyana Scheme Apply Online 2026
ಮಳೆಯನ್ನೇ ನಂಬಿ ಕೃಷಿಮಾಡುತ್ತಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕೊಳವೆ ಬಾವಿ ಅಥವಾ ತೆರೆದ ಬಾವಿಗಳ ಮೂಲಕ ಶಾಶ್ವತ ನೀರಾವರಿ ಸೌಲಭ್ಯಗಳನ್ನು ಒದಗಿಸುವುದು
ನೀರಾವರಿ ಸೌಲಭ್ಯ ಒದಗಿಸುವ ಮೂಲಕ ರೈತರು ಎರಡು ಅಥವಾ ಮೂರು ಬೆಳೆಗಳನ್ನು ಬೆಳೆಯಲು ಉತ್ತೇಜಿಸುವುದು ಮತ್ತು ಆ ಮೂಲಕ ಒಟ್ಟಾರೆ ಕೃಷಿ ಇಳುವರಿಯನ್ನು ಹೆಚ್ಚಿಸುವುದು
ಹಿಂದುಳಿದ ವರ್ಗದವರು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮತ್ತು ಅಲ್ಪಸಂಖ್ಯಾತ ಸಮುದಾಯದ ಬಡ ರೈತರ ಆರ್ಥಿಕ ಸ್ಥಿತಿಯನ್ನ ಸುಧಾರಿಸುವುದು ಮತ್ತು ಅವರ ಜೀವನ ಮಟ್ಟವನ್ನು ಮೇಲೆತ್ತುವುದು
ಗ್ರಾಮೀಣ ಭಾಗದ ರೈತರಿಗೆ ತಮ್ಮದೇ ಜಮೀನಿನಲ್ಲಿ ಕೆಲಸ ಮತ್ತು ಆದಾಯ ಸಿಗುವಂತೆ ಮಾಡುವುದು ಮತ್ತು ಅವರು ಕೆಲಸಕ್ಕಾಗಿ ನಗರ ಪ್ರದೇಶಕ್ಕೆ ಹೋಗುವುದನ್ನು ತಪ್ಪಿಸುವುದು
ರೈತರಿಗೆ ಪಂಪ್ ಸೆಟ್ ಮತ್ತು ವಿದ್ಯುತ್ ವ್ಯವಸ್ಥೆಯನ್ನು ಒದಗಿಸಿ ಆಧುನಿಕ ತಂತ್ರಜ್ಞಾನ ಬಳಸಿ ಕೃಷಿ ಮಾಡಲು ನೆರವಾಗುತ್ತದೆ

ಅರ್ಜಿ ದಾರರ ವರ್ಗ ಪ್ರದೇಶ ಸಹಾಯಧನ
ಸಾಮಾನ್ಯ ವರ್ಗ ಗ್ರಾಮೀಣ ₹2.50 ಲಕ್ಷ ವರೆಗೆ ಸಹಾಯಧನ ನೀಡಲಾಗುತ್ತದೆ.
SC/ST Category ಗ್ರಾಮೀಣ ₹4,75.000 ಸಹಾಯಧನ
SC/ST Category ನಗರ ₹4,75.000 ಸಹಾಯಧನ

ಸೌಲಭ್ಯ ವಿವರ
ಉಚಿತ ಬೋರ್ ವೆಲ್ ನಿಗದಿತ ಆಳದವರೆಗೆ ಉಚಿತವಾಗಿ ಕೊಳವೆ ಬಾವಿ ಕೊರೆಯಲಾಗುತ್ತದೆ.
*ಪಂಪ್ ಸೆಟ್ ವಿತರಣೆ * ಗುಣಮಟ್ಟದ ಪಂಪ್ ಸೆಟ್ ಮತ್ತು ಪೈಪ್ ಗಳನ್ನು ಉಚಿತವಾಗಿ ನೀಡಲಾಗುತ್ತದೆ.
ವಿದ್ಯುದ್ದೀಕರಣ ಎಸ್ಕಾಂಗಳ ಮೂಲಕ ವಿದ್ಯುತ್ ಕಂಬ ಮತ್ತು ವೈರ್ಗಳನ್ನೂ ಅಳವಡಿಸಿ ಸಂಪರ್ಕನೀಡಲಾಗುತ್ತದೆ
ಉದ್ಯೋಗ ಸೃಷ್ಟಿ ರೈತರು ಕೂಲಿ ಕೆಲಸಕ್ಕೆ ಹೋಗುವ ಬದಲಿಗೆ ತಮ್ಮ ಜಮೀನಲ್ಲಿ ಕೆಲಸ ಮಾಡಿ ಹಲವು ಜನರಿಗೆ ಕೆಲಸ ಕೊಡಬಹುದು

Leave a Reply

Your email address will not be published. Required fields are marked *